ತಮಿಳು ರಂಗನಟ, ಚಿತ್ರಸಾಹಿತಿ ಕ್ರೇಝಿ ಮೋಹನ್ ಇನ್ನಿಲ್ಲ

Update: 2019-06-10 16:36 GMT

 ಚೆನ್ನೈ, ಜೂ.10: ತಮಿಳುಚಿತ್ರರಂಗದ ಜನಪ್ರಿಯ ಸಿನೆಮಾ, ರಂಗಭೂಮಿನಟ,ಬರಹಗಾರ ಕ್ರೇಝಿ ಮೋಹನ್ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

 ಕ್ರೇಝಿ ಮೋಹನ್ ನಟನೆಯ ಚಾಕೋಲೇಟ್ ಕೃಷ್ಣ 1 ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿತ್ತು. ಕ್ರೇಝಿ ಥೀವ್ಸ್ ಇನ್ ಪಾಲವಕ್ಕಂ ಹಾಗೂ ಆದರ ಮುಂದುವರಿದ ಭಾಗವಾದ ರಿಟರ್ನ್ ಆಫ್ ಕ್ರೇಝಿ ಥೀವ್ಸ್ ನಾಟಕಗಳು ಮೋಹನ್ ಅವರಿಗೆ ವ್ಯಾಪಕ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು.

 1979ರಲ್ಲಿ ತನ್ನ ಸಹೋದರ ಆರ್.ಬಾಲಾಜಿ ಜೊತೆಗೂಡಿ ಕ್ರೇಝಿ ಕ್ರಿಯೇಶನ್ಸ್ ನಾಟಕತಂಡವನ್ನು ಮೋಹನ್ ಸ್ಥಾಪಿಸಿದ್ದರು. ಟಿವಿರಂಗದಲ್ಲೂ ಜನಪ್ರಿಯರಾಗಿದ್ದ ಮೋಹನ್ ಅವರ ಹಿಯರ್‌ಇಸ್ ಕ್ರೇಜಿ ಹಾಗೂ ಸಿರಿಸಿರಿ ಕ್ರೇಝಿ ಕಾಮಿಡಿ ಧಾರಾವಾಹಿಗಳು ಜನಪ್ರಿಯವಾಗಿದ್ದವು.

ಕ್ರೇಝಿ ಮೋಹನ್ ಅವರನ್ನು ಚಿತ್ರಸಾಹಿತಿಯಾಗಿ ಕಮಲಹಾಸನ್ ಅವರು ತಮಿಳುಚಿತ್ರರಂಗಕ್ಕೆ ಪರಿಚಯಿಸಿದ್ದರು. ಕಮಲಹಾಸನ್ ಅವರ ಅಪೂರ್ವ ಸಹೋದರಂಗಳ್, ಮೈಕೆಲ್ ಮದನ ಕಾಮರಾಜನ್, ಸತಿ ಲೀಲಾವತಿ, ಅವೈ ಷಣ್ಮುಖಿ, ಕಾದಲ ಕಾದಲ ಸೇರಿದ ಹಾಗೂ ವಸೂಲ್ ರಾಜ ಎಂಬಿಬಿಎಸ್ ಸೇರಿದಂತೆ ಹಲವಾರು ಚಿತ್ರಗಳಿಗೆ ಸಂಭಾಷಣೆ ಹಾಗೂ ಚಿತ್ರಕಥೆಯನ್ನು ಅವರು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News