×
Ad

ಜೂ. 13: ಮುಹಿಯುದ್ದೀನ್ ಸಮುದಾಯ ಭವನ ಉದ್ಘಾಟನಾ ಸಮಾರಂಭ

Update: 2019-06-10 22:35 IST

ಬಂಟ್ವಾಳ, ಜೂ. 10: ಬಿ.ಸಿ.ರೋಡ್-ಮಿತ್ತಬೈಲ್ ನ ಮುಹಿಯುದ್ದೀನ್ ಜುಮಾ ಮಸೀದಿ ಇದರ ಅಧೀನದಲ್ಲಿ ನೂತನವಾಗಿ ನಿರ್ಮಿಸಲಾದ ಮುಹಿಯುದ್ದೀನ್ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಜೂ. 13ರಂದು ನಡೆಯಲಿದೆ.

ದ.ಕ. ಜಿಲ್ಲಾ  ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಅತ್ರಾಡಿ ಖಾಝಿ ವಿ.ಕೆ.ಅಬೂಬಕರ್ ಮುಸ್ಲಿಯಾರ್ ದುಆಃ ನೆರವೇರಿಸುವರು. ಮಿತ್ತಬೈಲ್ ಎಂಜೆಎಂ ಅಧ್ಯಕ್ಷ ಹಬೀಬುಲ್ಲಾ ಅಧ್ಯಕ್ಷತೆ ವಹಿಸುವರು.

ಸಚಿವರಾದ ಯು.ಟಿ.ಖಾದರ್,  ಝಮೀರ್ ಅಹ್ಮದ್ ಖಾನ್, ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್, ಬಿ.ಕೆ. ಹರಿಪ್ರಸಾದ್, ಶಾಸಕ ರಾಜೇಶ್ ನಾಯ್ಕ್, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ರಾಜ್ಯ ವಕ್ಫ್ ಅಧಿಕಾರಿ ಅಬ್ಬಾಸ್ ಶರೀಫ್ ಮತ್ತಿತರರು ಭಾಗವಹಿಸುವರು ಎಂದು ಎಂಜೆಎಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News