ಗೂಗಲ್ ನ್ಯೂಸ್‌ನಿಂದ 32,700 ಕೋಟಿ ರೂ. ಸಂಪಾದನೆ

Update: 2019-06-10 18:04 GMT

ವಾಶಿಂಗ್ಟನ್, ಜೂ. 10: ಜಗತ್ತಿನಾದ್ಯಂತ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಮುಚ್ಚಿವೆ ಹಾಗೂ ದೊಡ್ಡ ಮಾಧ್ಯಮ ಸಂಸ್ಥೆಗಳು ತಮ್ಮ ಪತ್ರಕರ್ತರಿಗೆ ಸೇವೆಯಿಂದ ವಜಾಗೊಳಿಸಿರುವ ನೋಟಿಸ್‌ಗಳನ್ನು ನೀಡುತ್ತಿವೆ. ಆದರೆ, ತಂತ್ರಜ್ಞಾನ ದೈತ್ಯ ಗೂಗಲ್ ಮಾತ್ರ ತನ್ನ ಶೋಧ ಮತ್ತು ಗೂಗಲ್ ನ್ಯೂಸ್‌ನಿಂದ 2018ರಲ್ಲಿ 4.7 ಬಿಲಿಯ ಡಾಲರ್ (ಸುಮಾರು 32,700 ಕೋಟಿ ರೂಪಾಯಿ) ಬಾಚಿಕೊಂಡಿದೆ.

ಇದು ಅಮೆರಿಕದ ಇಡೀ ಸುದ್ದಿ ಉದ್ದಿಮೆ ಕಳೆದ ವರ್ಷ ಸಂಪಾದಿಸಿದ ಹಣಕ್ಕೆ ಸಮವಾಗಿದೆ.

ಅಮೆರಿಕದ ಸುದ್ದಿ ಉದ್ದಿಮೆಯು ಕಳೆದ ವರ್ಷ ಡಿಜಿಟಲ್ ಜಾಹೀರಾತಿನಿಂದ ಸುಮಾರು 5.1 ಬಿಲಿಯ ಡಾಲರ್ (ಸುಮಾರು 35,484 ಕೋಟಿ ರೂಪಾಯಿ) ಸಂಪಾದಿಸಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ನ ವರದಿಯೊಂದು ತಿಳಿಸಿದೆ.

ಅಮೆರಿಕದಾದ್ಯಂತ 2,000ಕ್ಕೂ ಅಧಿಕ ಪತ್ರಿಕೆಗಳನ್ನು ಪ್ರತಿನಿಧಿಸುವ ನ್ಯೂಸ್ ಮೀಡಿಯ ಅಲಯನ್ಸ್‌ನಿಂದ ಪಡೆದ ಅಂಕಿಅಂಶಗಳನ್ನು ಆಧರಿಸಿ ಪತ್ರಿಕೆಯು ಈ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News