ಜೂ. 30ರೊಳಗೆ ಅಘೋಷಿತ ಆಸ್ತಿ ಘೋಷಿಸಿ: ಇಮ್ರಾನ್ ಮನವಿ

Update: 2019-06-10 18:07 GMT

ಇಸ್ಲಾಮಾಬಾದ್, ಜೂ. 10: ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪಾಕಿಸ್ತಾನವು ತನ್ನ ಆರ್ಥಿಕತೆಯನ್ನು ತಹಬಂದಿಗೆ ತರಲು ಪ್ರಯತ್ನಿಸುತ್ತಿದ್ದು, ತಮ್ಮ ಅಘೋಷಿತ ಆಸ್ತಿಗಳನ್ನು ಜೂನ್ 30ರ ಒಳಗೆ ಘೋಷಿಸದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಎಚ್ಚರಿಸಿದ್ದಾರೆ.

ಮಂಗಳವಾರ ಮಂಡಿಸಲಾಗುವ 2019-20ರ ಆರ್ಥಿಕ ವರ್ಷದ ಬಜೆಟ್‌ಗೆ ಪೂರ್ವಭಾವಿಯಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ಇಮ್ರಾನ್, ‘‘ನಾವು ಶ್ರೇಷ್ಠ ದೇಶವಾಗಬೇಕಾದರೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಅಗತ್ಯವಿದೆ’’ ಎಂದರು.

‘‘ನಾವು ಜಾರಿಗೆ ತಂದಿರುವ ಆಸ್ತಿ ಘೋಷಣೆ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ. ನಾವು ತೆರಿಗೆ ಪಾವತಿಸದಿದ್ದರೆ, ನಮ್ಮ ದೇಶವನ್ನು ಮೇಲೆತ್ತಲು ನಮಗೆ ಸಾಧ್ಯವಾಗುವುದಿಲ್ಲ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News