ಮುಂಬೈನಲ್ಲಿ ಚಂಡಮಾರುತ: ವಿಮಾನ ನಿಲ್ದಾಣ ಭಾಗಶಃ ಸ್ಥಗಿತ

Update: 2019-06-11 03:46 GMT

ಮುಂಬೈ: ನಗರದಲ್ಲಿ ಬೀಸಿದ ಚಂಡಮಾರುತದಿಂದಾಗಿ ಛತ್ರಪತಿ ಶಿವಾಜಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ.

ದಟ್ಟ ಮೋಡ ಮತ್ತು ಚಂಡಮಾರುತದ ಹಿನ್ನೆಲೆಯಲ್ಲಿ ಸೋಮವಾರ 22 ವಿಮಾನಗಳ ಮಾರ್ಗ ಬದಲಿಸಿ ದೆಹಲಿ, ಹೈದರಾಬಾದ್ ಮತ್ತು ಅಹ್ಮದಾಬಾದ್‌ಗೆ ವರ್ಗಾಯಿಸಲಾಗಿದೆ.

ಆರು ಅಂತರ್ ರಾಷ್ಟ್ರೀಯ ವಿಮಾನಗಳು ಹಾಗೂ 16 ದೇಶೀಯ ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ಹೇಳಿದ್ದಾರೆ.

ಸೋಮವಾರ ರಾತ್ರಿ ನ್ಯೂಯಾರ್ಕ್‌ನಿಂದ ಮುಂಬೈಗೆ ಬರುತ್ತಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನವನ್ನು ದೆಹಲಿಗೆ ಮರು ನಿರ್ದೇಶಿಸಲಾಯಿತು. ಅಂತೆಯೇ ದೆಹಲಿಯಿಂದ ಮುಂಬೈಗೆ ಬರುತ್ತಿದ್ದ ಗೋ ಏರ್ ವಿಮಾನವನ್ನು ಅಹ್ಮದಾಬಾದ್‌ಗೆ ಮರು ನಿರ್ದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಥಾಯ್ ಏರ್‌ವೇಸ್‌ನ ವಿಮಾನವೊಂದು ರನ್‌ವೇಯಿಂದ ತೆರಳುತ್ತಿದ್ದಾಗ ಸುರಕ್ಷಾ ದೀಪಕ್ಕೆ ಬಡಿದಿದೆ. ಅವಶೇಷಗಳನ್ನು ರನ್‌ವೇನಿಂದ ಸ್ವಚ್ಛಗೊಳಿಸುತ್ತಿರುವುದು ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News