ಉಡುಪಿ: ನಕ್ಷತ್ರ ವನ ಯೋಜನೆಗೆ ಚಾಲನೆ

Update: 2019-06-11 15:29 GMT

ಉಡುಪಿ, ಜೂ.11: ಧರ್ಮ ಫೌಂಡೇಷನ್ ನಮ್ಮ ಹಿರಿಯರು ಹೇಳಿಕೊಂಡ ಪವಿತ್ರ ವನಗಳನ್ನು ಪುನರ್‌ನಿರ್ಮಿಸಲು ಮುಂದಾಗಿದ್ದು, ‘ನಕ್ಷತ್ರ ವನ’ಗಳ ಹೆಸರಿನಲ್ಲಿ ದೇಶಾದ್ಯಂತ ಇದನ್ನು ನಿರ್ಮಿಸುವ, ಅದರ ಮೂಲಕ ಜನರಿಗೆ ಪರಿಸರ, ಗಿಡಮರಗಳ ಕುರಿತು ಅರಿವು ಮೂಡಿಸಲು ಯೋಜನೆ ಹಾಕಿಕೊಂಡಿದೆ.

ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಗೆ ವಿಶ್ವ ಪರಿಸರ ದಿನದಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಚಾಲನೆ ನೀಡಲಾಯಿತು. ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಯೋಜನೆಯನ್ನು ಉದ್ಘಾಟಿಸಿದರು.

ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು 27 ನಕ್ಷತ್ರ ಗಳನ್ನು ಪ್ರತಿನಿಧಿಸುವ 27 ವಿಧದ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ಕಟೀಲು ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಅಸ್ರಣ್ಣ, ಧರ್ಮ ಫೌಂಡೇಷನ್‌ನ ಅಧ್ಯಕ್ಷ ಗಿರೀಶ್ ಜಿ.ಎನ್. ಹಾಗೂ ಉಡುಪಿ ಅಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News