ಎನ್‌ಎಂಪಿಟಿ ಬಂದರು ಮಂಡಳಿಯ ನೂತನ ಅಧ್ಯಕ್ಷರಾಗಿ ಎ.ವಿ.ರಮಣ ಅಧಿಕಾರ ಸ್ವೀಕಾರ
Update: 2019-06-11 21:30 IST
ಮಂಗಳೂರು, ಜೂ.11: ನವಮಂಗಳೂರು ಬಂದರು ಮಂಡಳಿಯ ನೂತನ ಅಧ್ಯಕ್ಷರಾಗಿ ಕೊಚ್ಚಿನ್ ಪೋರ್ಟ್ ಟ್ರಸ್ಟ್‌ನ ಉಪಾಧ್ಯಕ್ಷರಾಗಿದ್ದ ಎ.ವಿ.ರಮಣ ಅವರನ್ನು ಕೇಂದ್ರ ನೌಕಾಸಚಿವಾಲಯ ನೇಮಕ ಮಾಡಿದೆ.
ಹಾಲಿ ಅಧ್ಯಕ್ಷೆಯಾಗಿದ್ದ ಬೀನಾ ಐಎಎಸ್ ಅವರಿಂದ ಅವರು ಇಂದು ಎ.ವಿ.ರಮಣರವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ನೂತನ ಅಧ್ಯಕ್ಷ ಎ.ವಿ.ರಮಣ ಈ ಹಿಂದೆ ಕೊಚ್ಚಿ ಬಂದರು ಮಂಡಳಿಯಲ್ಲಿ ಆಗಸ್ಟ್ 2016 ರಿಂದ ಮಾರ್ಚ್ 2017ರವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕೊಲ್ಕತ್ತಾ ಪೋರ್ಟ್ ಟ್ರಸ್ಟ್‌ನಲ್ಲಿ ಪ್ರಧಾನ ಮ್ಯಾಕಾನಿಕಲ್ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದು, ಭಾರತೀಯ ಬಂದರು ಮಂಡಳಿಯ ಸಂಘಟನೆ ಪ್ರಧಾನ ಆಡಳಿತಾಧಿಕಾರಿಯಾಗಿ, ಇಂಡಿಯನ್ ಮೆರಿಟೈಮ್ ವಿಶ್ವ ವಿದ್ಯಾನಿಲಯದ ಉಪ ನಿರ್ದೇಶಕರಾಗಿ ಸೇರಿದಂತೆ ಬಂದರು ವಿಭಾಗದಲ್ಲಿ 26 ವರ್ಷಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಸೇವಾನುಭವವನ್ನು ಹೊಂದಿದ್ದಾರೆ.