ಅಂಗಡಿಗೆ ನುಗ್ಗಿ ನಗದು ಕಳವು: ದೂರು

Update: 2019-06-11 16:18 GMT

ಕುಂದಾಪುರ, ಜೂ.11: ಚಿಕನ್‌ಸಾಲ್ ರಸ್ತೆಯಲ್ಲಿರುವ ಕ್ರಾಸ್ಟೊ ಗ್ಯಾರೇಜ್ ಬಳಿಯ ಕೆ.ಪಿ.ಚಂದ್ರಶೇಖರ್ ಎಂಬವರ ನ್ಯೂ ಮೂಕಾಂಬಿಕಾ ಜನರಲ್ ಸ್ಟೋರ್‌ಗೆ ಜೂ.10ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಅಂಗಡಿಯ ಶೆಟರ್ ಹಾಗೂ ಗ್ರಿಲ್‌ಗೆ ಅಳವಡಿಸಿದ ಬೀಗಗಳನ್ನು ಮುರಿದು ಒಳನುಗ್ಗಿದ ಕಳ್ಳರು, 12,000 ರೂ. ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News