ಮಹಾಕಾಳಿಪಡ್ಪು: ತೋಡು ಸರಿಪಡಿಸಲು ಕಾಂಗ್ರೆಸ್ ಮನವಿ

Update: 2019-06-11 16:26 GMT

ಮಂಗಳೂರು, ಜೂ.11: ಜಪ್ಪು ಮಹಾಕಾಳಿಪಡ್ಪು ಏರಾಡಿ ಬಳಿಯಲ್ಲಿರುವ ಬೃಹತ್ ತೋಡಿನಲ್ಲಿ ನೀರು ಸರಾಗವಾಗಿ ಹರಿಯದಿರುವುದನ್ನು ಕಂಡು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯು ಮಾಜಿ ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಮ್ಮುಖದಲ್ಲಿ ಮನವಿ ಸಲ್ಲಿಸಲಾಯಿತು.

ಈ ಬೃಹತ್ ತೋಡಿನಲ್ಲಿ ಬಹಳಷ್ಟು ಹೂಳು ತುಂಬಿರುವುದು ಮಾತ್ರವಲ್ಲದೇ ಡ್ರೈನೇಜ್ ನೀರು ಸೇರಿಕೊಂಡು ಬಹಳಷ್ಟು ಮಲಿನವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದೆ. ಬೃಹತ್ ತೋಡು ಮಹಾಕಾಳಿಪಡ್ಪು ಪಟ್ನ ಬಳಿಯ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಹಾದುಹೋಗಿರುತ್ತದೆ. ಈ ತೋಡಿನಲ್ಲಿ ನೀರು ಹರಿಯದೇ ಅಲ್ಲಿಯೂ ನಿಂತು ಅಲ್ಲಿ ವಾಸಿಸುತ್ತಿರುವ ಜನರಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್, ಮನಪಾ ಮಾಜಿ ಸದಸ್ಯರಾದ ಶೈಲಜಾ, ಅಪ್ಪಿ ಹಾಗೂ ಪಕ್ಷದ ಪದಾಧಿಕಾರಿಗಳಾದ ಟಿ.ಕೆ. ಸುಧೀರ್, ಸದಾಶಿವ ಅಮೀನ್, ಸುರೇಶ್ ಶೆಟ್ಟಿ, ದಿನೇಶ್ ರಾವ್, ಮುಹಮ್ಮದ್ ನವಾಝ್, ಸೀತಾರಾಮ ಮೊದಲಾದವರು ಉಪಸ್ಥಿತಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News