ಮಲ್ಪೆ ನಾಡದೋಣಿ ಮೀನುಗಾರರಿಂದ ಸಮುದ್ರಪೂಜೆ

Update: 2019-06-12 13:59 GMT

ಮಲ್ಪೆ, ಜೂ.12: ಯಾಂತ್ರೀಕೃತ ಹಾಗೂ ಆಳಸಮುದ್ರ ಮೀನುಗಾರಿಕೆ ಋತು ಮುಕ್ತಾಯಗೊಂಡು, ಎರಡು ತಿಂಗಳ ನಾಡದೋಣಿ ಮೀನುಗಾರಿಕೆ ಆರಂಭಗೊಂಡ ಹಿನ್ನೆಲೆಯಲ್ಲಿ ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಂದ ಬುಧವಾರ ಮಲ್ಪೆ ವಡಭಾಂಡೇಶ್ವರದಲ್ಲಿ ಸಮುದ್ರ ಪೂಜೆಯನ್ನು ನೆರವೇರಿಸಲಾಯಿತು.

ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನಿಗೆ ಗಣಹೋಮ ಸಲ್ಲಿಸಿ, ಬಳಿಕ ವಡ ಭಾಂಡ ಬಲರಾಮದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಅನಂತರ ಸಮುದ್ರ ರಾಜನಿಗೆ ಲಪುಷ್ಪ, ಕ್ಷೆರವನ್ನು ಸಮರ್ಪಿಸಿ ಮಳೆಗಾಲದ ಅವಧಿ ಯಲ್ಲಿ ಯಾವುದೇ ಅವಘಡಗಳು ಸಂಭವಿಸದಿರಲಿ, ಹೇರಳ ಮತ್ಸ್ಯ ಸಂಪತ್ತು ದೊರೆಯಲಿ ಎಂದು ಮೀನುಗಾರರು ಸಮುದ್ರಮಾತೆಯಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಲ್ಪೆ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ, ಕಾರ್ಯದರ್ಶಿ ಸದಾಶಿವ ಕಾಂಚನ್, ಕೋಶಾಧಿಕಾರಿ ಹರೀಶ್ ತಿಂಗಳಾಯ ಹಾಗೂ 38 ಡಿಸ್ಕೋ ಫಂಡಿನ ಸದಸ್ಯರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News