ಪ್ರೌಢ ಶಾಲಾ ಮುಖ್ಯ ಶಿಕ್ಷಕರ-ಪ.ಪೂ.ಕಾಲೇಜು ಪ್ರಾಂಶುಪಾಲರ ಸಂಘದಿಂದ ಶೈಕ್ಷಣಿಕ ಸಮ್ಮೇಳನ

Update: 2019-06-12 14:02 GMT

ಮಂಗಳೂರು, ಜೂ.12:ಮಂಗಳೂರು ನಗರ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹಾಗೂ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ಜಂಟಿ ಆಶ್ರಯದಲ್ಲಿ ನಗರದ ರೊಸಾರಿಯೋ ಚರ್ಚ್‌ನ ಸಭಾಂಗಣದಲ್ಲಿ ಬುಧವಾರ ಶೈಕ್ಷಣಿಕ ಸಮ್ಮೇಳನ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಮೊನ್ಸಿಂಜೋರ್ ಮ್ಯಾಕ್ಸಿಂ ನೊರೊನ್ಹಾ ಸಮಾಜದಲ್ಲಿ ಶೈಕ್ಷಣಿಕ ಕ್ಷೇತ್ರ ಅತೀ ಹೆಚ್ಚು ಗಮನ ಸೆಳೆಯುತ್ತದೆ. ವೌಲ್ಯಾಧಾರಿತ ಶಿಕ್ಷಣ ನೀಡುವುದರ ಜೊತೆಗೆ ನಾಡಿಗೆ ಒಳ್ಳೆಯ ನಾಗರಿಕರನ್ನು ರೂಪಿಸುವ ಕೆಲಸ ಮಾಡುವ ಕಾರ್ಯ ಆಗಲಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ‘ಮಂಗಳೂರು’ ನಮ್ಮದು ಎನ್ನುವ ಕಲ್ಪನೆಯ ಜತೆಗೆ ಅದರ ಸ್ವಚ್ಛತೆಯ ಹೊಣೆಗಾರಿಕೆ ಕೂಡ ನಮ್ಮದು ಎನ್ನುವ ಭಾವ ಬಂದರೆ ಮಾತ್ರ ಮಂಗಳೂರು ಸುಂದರ ನಗರವಾಗಿ ಬದಲಾಗುತ್ತದೆ. ಅದಕ್ಕೆ ಜಾಗೃತಿ ಅಗತ್ಯ ಎಂದರು.

ಈ ಸಂದರ್ಭ ಎಸೆಸ್ಸೆಲ್ಸಿ 2019ರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಶೇ.100 ಲಿತಾಂಶ ಪಡೆದ ಶಾಲೆಯ ಮುಖ್ಯಸ್ಥರಿಗೆ ಗೌರವಾರ್ಪಣೆ, ನಿವೃತ್ತ ಮುಖ್ಯಸ್ಥರಿಗೆ ಸನ್ಮಾನ ಹಾಗೂ ಸ್ಟ್ಯಾನಿ ಫ್ರಾನ್ಸಿಸ್ ಬಾರೆಟ್ಟೋ ಸ್ಕಾಲರ್‌ ಶಿಪ್ ವಿತರಿಸಲಾಯಿತು. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕಗಳನ್ನು ಪಡೆದುಕೊಂಡ ಆಳ್ವಾಸ್ ಮೂಡುಬಿದಿರೆಯ ವಿದ್ಯಾರ್ಥಿ ಸುಜ್ಞಾನ್ ಅವರನ್ನು ಸನ್ಮಾನಿಸಲಾಯಿತು.

ಐಡಿಯಲ್ ಪ್ಲೇ ಅಭಾಕಸ್ ಇಂಡಿಯಾದ ಮುಖ್ಯಸ್ಥ ಸಂಗೀತಾ ಕಾಮತ್, ಮಂಗಳೂರು ಮಿಲಾಗ್ರಿಸ್ ಪ್ರೌಢ ಶಾಲೆಯ ಪದವೀಧರ ಸಹಾಯಕ ಸ್ಟ್ಯಾನಿ ಫ್ರಾನ್ಸಿಸ್ ಬಾರೊಟ್ಟೊ, ಮಂಗಳೂರು ನಗರ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹಾಗೂ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜ ಮಾತನಾಡಿದರು. ವಿನ್ಸೆಂಟ್ ಡಿಕೋಸ್ತಾ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News