ಭೀಮಾ ಕೋರೆಗಾಂವ್ ಪ್ರಕರಣ: ಸ್ಟೇನ್ ಸ್ವಾಮಿ ನಿವಾಸದಲ್ಲಿ ಮತ್ತೆ ಪೊಲೀಸರ ಶೋಧ

Update: 2019-06-12 14:51 GMT

ಪುಣೆ, ಜೂ.12: ಮಾವೋವಾದಿಗಳ ಜತೆ ನಂಟು ಹೊಂದಿರುವ ಆರೋಪದಲ್ಲಿ ಮತ್ತು ಭೀಮಾ ಕೋರೆಗಾಂವ್ -ಎಲ್ಗರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ರಾಂಚಿಯಲ್ಲಿರುವ ಸಾಮಾಜಿಕ ಹೋರಾಟಗಾರ ಸ್ಟೇನ್ ಸ್ವಾಮಿಯ ನಿವಾಸದ ಮೇಲೆ ಪುಣೆ ಪೊಲೀಸರ ತಂಡ ಬುಧವಾರ ದಾಳಿ ಮಾಡಿ ಶೋಧ ನಡೆಸಿದೆ.

ಆದರೆ ಅವರನ್ನು ಪೊಲೀಸರು ವಶಕ್ಕೆ ಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಜಾರ್ಖಂಡ್‌ನ ರಾಂಚಿಯಲ್ಲಿರುವ ಫಾದರ್ ಸ್ಟೇನ್ ಸ್ವಾಮಿಯ ಮನೆಯ ಮೇಲೆ ದಾಳಿ ನಡೆದಿರುವುದನ್ನು ಖಚಿತಪಡಿಸಿರುವ ಪೊಲೀಸ್ ಉಪ ಆಯುಕ್ತ ಶಿವಾಜಿ ಪವಾರ್, ಪ್ರಕರಣದಲ್ಲಿ ಹೊಸ ಬೆಳವಣಿಗೆಗೆ ಸಂಬಂಧಿಸಿ ದಾಳಿ ನಡೆಸಲಾಗಿದ್ದು ಕೆಲವು ಇ-ಮೇಲ್ ದಾಖಲೆ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಕಳೆದ ವರ್ಷದ ಆಗಸ್ಟ್ 28ರಂದು ಪೊಲೀಸರು ಸ್ಟೇನ್ ಸ್ವಾಮಿ ಹಾಗೂ ಇತರ ಆರು ಸಾಮಾಜಿಕ ಹೋರಾಟಗಾರರ ನಿವಾಸದ ಮೇಲೆ ದಾಳಿ ನಡೆಸಿದ್ದರು. ಫಾದರ್ ಸ್ಟೇನ್ ಸ್ವಾಮಿ ಆದಿವಾಸಿ ಮಕ್ಕಳಿಗಾಗಿ ಶಾಲೆಯನ್ನು ನಡೆಸುತ್ತಿದ್ದಾರೆ ಮತ್ತು ತಮ್ಮ ಮನೆಯಲ್ಲಿ ತಾಂತ್ರಿಕ ತರಬೇತಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News