ನಿವೃತ್ತ ಸಿಜೆಐಗೆ 1 ಲಕ್ಷ ರೂ. ವಂಚಿಸಿದ ಆರೋಪಿಯ ಬಂಧನ

Update: 2019-06-12 14:54 GMT

ಹೊಸದಿಲ್ಲಿ,ಜೂ.12: ಭಾರತದ ಮುಖ್ಯನ್ಯಾಯಮೂರ್ತಿ (ಸಿಜೆಐ) ಆರ್.ಎಂ. ಲೋಧಾ ಅವರಿಗೆ ಒಂದು ಲಕ್ಷ ರೂ. ವಂಚಿಸಿದ ಆರೋಪದಲ್ಲಿ ಓರ್ವನನ್ನು ಬುಧವಾರ ಬಂಧಿಸಲಾಗಿದೆ. ಬಂಧಿತ ಆರೋಪಿ ದಿನೇಶ್ ಮಾಲಿ ಎಂಬಾತ ಲೋಧಾ ಅವರ ಮಾಜಿ ಸಹೋದ್ಯೋಗಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ.ಪಿ.ಸಿಂಗ್ ಅವರ ಇಮೇಲ್ ಖಾತೆಯನ್ನ್ನು ಹ್ಯಾಕ್ ಮಾಡಿ, ಅದರ ಮೂಲಕ ಲೋಧಾ ಅವರಿಗೆ ಸಂದೇಶ ಕಳುಹಿಸಿ, ಅವರ ಖಾತೆಯಲ್ಲಿದ್ದ 1 ಲಕ್ಷ ರೂ.ಗಳನ್ನು ಲಪಟಾಯಿಸಿದ್ದಾನೆಂದು ಪೊಲೀಸರು ಆರೋಪಿಸಿದ್ದಾರೆ.

  ಈ ತಿಂಗಳ ಆರಂಭದಲ್ಲಿ ಉದಯಪುರದಲ್ಲಿ ದಿನೇಶ್‌ಮಾಲಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಪೊಲೀಸರು ಬಳಿಕ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರೆಂದು ದಕ್ಷಿಣ ದಿಲ್ಲಿಯ ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಆರೋಪಿಯನ್ನು ಮಂಗಳವಾರ ಉದಯಪುರದಿಂದ ಕರೆತರಲಾ ಗಿದ್ದು,ದಿಲ್ಲಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆತನಿಗೆ ನ್ಯಾಯಾಧೀಶರು ಎರಡು ದಿನಗಳ ಕಸ್ಡಡಿ ವಿಧಿಸಿದ್ದಾರೆ. ಪೊಲೀಸರು ಆತನ ಕಸ್ಟಡಿಯ ಅವಧಿಯನ್ನು ವಿಸ್ತರಣೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ದಕ್ಷಿಣ ದಿಲ್ಲಿಯ ಪಂಚಶೀಲ ಪಾರ್ಕ್‌ನ ನಿವಾಸಿಯಾದ ನಿವೃತ್ತ ಸಿಜೆಐ ಆರ್.ಎಂ.ಲೋಧಾ ಅವರು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ಎಂ.ಲೋಧಾ ಅವರಿಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿ.ಪಿ.ಸಿಂಗ್ ಅವರು ಇಮೇಲ್ ಪತ್ರ ಬರೆದು, ತನ್ನ ಇಮೇಲ್ ವಿಳಾಸವನ್ನು ಆಜ್ಞಾತ ವ್ಯಕ್ತಿಯೊಬ್ಬ ಹ್ಯಾಕ್ ಮಾಡಿದ್ದಾನೆ ಎಂದು ತಿಳಿಸಿದ ಬಳಿಕ ಈ ಘಟನೆಯು ಬೆಳಕಿಗೆ ಬಂದಿತ್ತು.

 ನಿವೃತ್ತ ನ್ಯಾಯಾಧೀಶ ಬಿ.ಪಿ.ಸಿಂಗ್ ಅವರ ಹ್ಯಾಕ್ ಮಾಡಲ್ಪಟ್ಟ ಇಮೇಲ್ ವಿಳಾಸದಿಂದ ತನಗೆ ಸಂದೇಶವೊಂದು ಬಂದ ಹಿನ್ನೆಲೆಯಲ್ಲಿ ತನ್ನ ಖಾತೆಯಿಂದ 1 ಲಕ್ಷ ರೂ. ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾಗಿ ಆರ್.ಎಂ. ಲೋಧಾ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News