ಕೆಮ್ಮಾರ ಮಹಿಳಾ ಶರೀಅತ್ ಕಾಲೇಜಿಗೆ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಮಾನ್ಯತೆ

Update: 2019-06-12 17:46 GMT

ಉಪ್ಪಿನಂಗಡಿ: ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಕಮಿಟಿ ಇದರ ಅಧೀನ ಸಂಸ್ಥೆ ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜಿಗೆ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಮಾನ್ಯತೆ ದೊರೆತಿದೆ ಎಂದು ಆತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ, ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್ ತಿಳಿಸಿದ್ದಾರೆ.

 ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಇದರ ಅಧ್ಯಕ್ಷ ಶೈಖುನಾ ಜಿಫ್ರಿ ಮುತ್ತುಕೋಯ ತಂಙಳ್ ಅಧ್ಯಕ್ಷತೆಯಲ್ಲಿ ಅಲ್‍ಹಾಜಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್, ಎ.ವಿ. ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಉಮರ್ ಫೈಝಿ ಮುಕ್ಕಂ, ಡಾ. ಎನ್.ಎ.ಯಂ. ಅಬ್ದುಲ್ ಖಾದರ್, ಅಬ್ದುಲ್ ಸಮದ್ ಪೂಕೋಟೂರು, ಯಂ.ಸಿ. ಮಾಯಿನ್ ಹಾಜಿ, ಮಾಯಿನ್ ಕುಟ್ಟಿ ಮುಸ್ಲಿಯಾರ್, ಅಬ್ದುಲ್ಲಾ ಮುಸ್ಲಿಯಾರ್ ಕೋಟ್ಟಪುರಂ ಮೊದಲಾದ ಅಗ್ರಗಣ್ಯ ಉಲೆಮಾಗಳ ಉಪಸ್ಥಿತಿಯಲ್ಲಿ ಕೇರಳದ ಚೇಲಾರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಮಾನ್ಯತೆ ನಿರ್ಣಯ ಅಂಗೀಕರಿಸಲಾಯಿತು.

ಕೇರಳದಾದ್ಯಂತದಿಂದ 84, ಜಿಲ್ಲೆಯಿಂದ 2: ಸಭೆಯಲ್ಲಿ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಿಂದ ಸೇರಿದಂತೆ ಒಟ್ಟು 94 ಮಹಿಳಾ ಶರೀಅತ್ ಕಾಲೇಜುಗಳಿಗೆ ಮಾನ್ಯತೆ ನೀಡಲಾಗಿದ್ದು, ಕರ್ನಾಟಕ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಮ್ಮಾರ ಕಾಲೇಜು ಜೊತೆಗೆ ಫಾತಿಮಾ ಮಹಿಳಾ ಕಾಲೇಜು ಈಶ್ವರಮಂಗಳ ಕಾಲೇಜು ಮಾನ್ಯತೆ ಪಡೆದುಕೊಂಡಿದೆ ಎಂದು ಅನಸ್ ತಂಙಳ್ ತಿಳಿಸಿದ್ದಾರೆ.

3 ವರ್ಷದ ಹಿಂದೆ ಪ್ರಾರಂಭಗೊಂಡ ಸಂಸ್ಥೆ: ಕೆಮ್ಮಾರ ಶಂಸುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು 3 ವರ್ಷದ ಹಿಂದೆ ಆರಂಭಗೊಂಡಿದ್ದು, ಕಳೆದ ಸಾಲಿನಲ್ಲಿ 80 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿರುತ್ತಾರೆ. ಇದೀಗ ದಾಖಲಾತಿ ಆರಂಭಗೊಂಡಿದ್ದು, ಸೇರಲಿಚ್ಚಿಸುವವರು ಸಂಸ್ಥೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅನಸ್ ತಂಙಳ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News