ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‍ಗೆ ಪುತ್ತೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

Update: 2019-06-12 18:03 GMT
ಸಂಧ್ಯಾ ಪ್ರಭು - ಸ್ತುತಿ ಎಂ.ಎಸ್ 

ಪುತ್ತೂರು: ಜೂನ್ 17 ರಿಂದ 21ತನಕ ನ್ಯೂಯಾರ್ಕ್‍ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್-2019ರಲ್ಲಿ ಭಾಗವಹಿಸಲು ಪುತ್ತೂರು ಸುದಾನ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್ ಮತ್ತು ಸಂಧ್ಯಾ ಪ್ರಭು ಆಯ್ಕೆಯಾಗಿದ್ದಾರೆ.

ಈ ವಿದ್ಯಾರ್ಥಿನಿಯರು ನಡೆಸಿದ 'ಎ ಸ್ಟಡಿ ಆನ್ ಅನ್ ಅಕ್ವಸ್ ಸೊಲ್ಯುಶನ್ ಆಫ್ ಕೆರಿಯ ಅರ್‍ಬೊರಿಯ ಆನ್ ವುಡರರ್ ಟೆರ್‍ಮಿಟೆಸ್' ಸಂಶೋಧನೆಯು ಇನ್‍ಸೆಫ್‍ನ ವಿಭಾಗೀಯ ಹಾಗೂ ನ. 19ರಂದು ರಾಜ್‍ಕೋಟ್‍ನಲ್ಲಿ ಜರಗಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕಗಳಿಸಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲಿದೆ. 

ಈ ವಿದ್ಯಾರ್ಥಿಗಳು ಸಂಶೋಧಿಸಿದ ದ್ರಾವಣವು ಮನೆಯ ಒಳಗೆ ಹಾಗೂ ಹೊರಗೆ ಕಾಣಿಸುವ ಎಲ್ಲಾ ತರಹದ ಗೆದ್ದಲು ಹುಳುಗಳ ನಿರ್ಮೂಲನೆ ಮಾಡಬಹುದಾಗಿದ್ದು, ಯಾವುದೇ ಕೃತಕ ರಾಸಾಯನಿಕಗಳಿಲ್ಲದೆ ಪರಿಸರಕ್ಕೆ ಹಾಗೂ ಆರೋಗ್ಯಕ್ಕೆ ಹಾನಿ ಮಾಡವುದಿಲ್ಲ. 
ವಿದ್ಯಾರ್ಥಿಗಳ ಈ ಪರಿಶ್ರಮವು 'ಯುಎಸ್ ಸೈನ್ಸ್ ಫಾರಂ' ನಿಂದ ಗುರುತಿಸಲ್ಪಟ್ಟಿದ್ದು ಐಆರ್ ಐಎಸ್ ನ್ಯಾಷನಲ್ ಲೆವೆಲ್ ಸ್ಪರ್ಧೆಯಲ್ಲಿ 500 ಯುಎಸ್ ಡಾಲರ್ಸ್ ಬಹುಮಾನವೂ ಇವರಿಗೆ ಲಭಿಸಿದೆ.  ಜೂ.14ರಂದು ನ್ಯಾಯಾರ್ಕ್‍ಗೆ ತೆರಳಲಿದ್ದಾರೆ.

ಸಂಶೋಧಕ ವಿದ್ಯಾರ್ಥಿನಿಯರಾದ ಸ್ತುತಿ ಎಮ್ ಎಸ್ ಅವರು ವಿವೇಕಾನಂದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೃಷ್ಣಗಣರಾಜ ಭಟ್ ಹಾಗೂ ಸೌಮ್ಯ ಭಟ್ ದಂಪತಿ ಪುತ್ರಿ. ವಿದ್ಯಾರ್ಥಿನಿ ಸಂಧ್ಯಾ ಪ್ರಭು ಅವರು ಉದ್ಯಮಿ ರಮೇಶ್ ಪ್ರಭು ಹಾಗೂ ರಜನಿ ಪ್ರಭು ಅವರ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News