ಭಾರತ-ನ್ಯೂಝಿಲ್ಯಾಂಡ್ ವಿಶ್ವಕಪ್ ಪಂದ್ಯ: ಇನ್ನೂ ಟಾಸ್ ಚಿಮ್ಮಿಸಲು ಅವಕಾಶ ನೀಡದ ಮಳೆ

Update: 2019-06-13 11:37 GMT

  ಟ್ರೆಂಟ್‌ಬ್ರಿಡ್ಜ್, ಜೂ.13: ಭಾರತ ಹಾಗೂ ನ್ಯೂಝಿಲ್ಯಾಂಡ್ ಮಧ್ಯೆ ಗುರುವಾರ ನಡೆಯಬೇಕಾಗಿದ್ದ ವಿಶ್ವಕಪ್‌ನ 17ನೇ ಪಂದ್ಯಕ್ಕೆ ಮಳೆ ಬಿಟ್ಟುಬಿಡದೇ ಕಾಡುತ್ತಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30ಕ್ಕೆ ಟಾಸ್ ಚಿಮ್ಮುವ ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ, ಮಳೆ ನಿರಂತರ ಸುರಿಯುತ್ತಿರುವ ಕಾರಣ ಈ ಪ್ರಕ್ರಿಯೆ ಇನ್ನೂ ನಡೆದಿಲ್ಲ.

ಈ ಬಾರಿಯ ವಿಶ್ವಕಪ್‌ನಲ್ಲಿ ಎರಡು ಪಂದ್ಯಗಳು ಒಂದೂ ಎಸೆತ ಕಾಣದೇ ರದ್ದಾಗಿವೆೆ. ಇನ್ನೊಂದು ಪಂದ್ಯ 7.5 ಓವರ್‌ಗಳಲ್ಲಿ ನಡೆಯುತ್ತಿದ್ದಾಗ ಮಳೆ ಅಡ್ಡಿಯಾಗಿತ್ತು. ಅಂತಿಮವಾಗಿ ಈಪಂದ್ಯ ವನ್ನು ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News