×
Ad

ಕರಾವಳಿಯಲ್ಲಿ ಧಾರಾಕಾರ ಮಳೆ: ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ

Update: 2019-06-13 18:31 IST

ಮಂಗಳೂರು, ಜೂ.13: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ.

ಜಿಲ್ಲೆಯಾದ್ಯಂತ ಬುಧವಾರದಿಂದ ಮುಂಗಾರು ಮಳೆ ಬಿರುಸು ಪಡೆದಿದ್ದು, ನಗರದ ವಿವಿಧೆಡೆ ಧಾರಾಕಾರ ಮಳೆಯಿಂದಾಗಿ ಮರಗಳು ಬಿದ್ದು ಹಾಗೂ ರಸ್ತೆ ಕಾಮಗಾರಿಗಳಿಂದಾಗಿ ನೀರು ಹರಿಯುವಲ್ಲಿ ತೊಂದರೆಯಾಗಿತ್ತು.

ಕಳೆದ ಸಾಲಿನ ಮಳೆಯ ಅನುಭವವನ್ನು ಹಿನ್ನೆಲೆಯಾಗಿರಿಸಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನೊಳಗೊಂಡಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕೈಗೊಂಡ ಕ್ರಮಗಳಿಂದಾಗಿ ಸಮಸ್ಯೆ ವರದಿಯಾದ ತಕ್ಷಣವೇ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ.

ದೋಣಿಗಳ ನಿಯೋಜನೆ

ಕೃತಕ ನೆರೆಗೆ ಕಾರಣಗಳನ್ನು ಕಂಡುಕೊಂಡು ಪರಿಹರಿಸಲು ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಆದ್ಯಪಾಡಿ ಪ್ರದೇಶದಲ್ಲಿ ಭೂಕುಸಿತ ಅಥವಾ ನೀರು ಬಂದರೆ ದೋಣಿಯನ್ನು ಕಾಯ್ದಿರಿಸಲಾಗಿದೆ. ಚಾರ್ಮಾಡಿಯಲ್ಲಿ ಮರ ಬಿದ್ದಿರುವುದನ್ನು ತೆರವುಗೊಳಿಸಲಾಗಿದೆ.

ಕೊಡಿಯಾಲ್‌ಬೈಲ್, ಡೊಂಗರಕೇರಿ ಸೋನಾರ್ ಅಪಾರ್ಟ್‌ಮೆಂಟ್ ಬಳಿ ನೀರು ನಿಲ್ಲಲು ಕಾರಣವಾದ ಸ್ಲ್ಯಾಬ್ ತೆಗೆಯಲು ಸೂಚಿಸಲಾಗಿದೆ. ಪಾಣೆಮಂಗಳೂರಿನ ಆಲಡ್ಕದಲ್ಲಿ ಭಾರೀ ಪ್ರವಾಹ ಬಂದಿಲ್ಲ. ಕೊಟ್ಟಾರ ಚೌಕಿಯಲ್ಲಿ ನೀರು ನಿಲ್ಲುತ್ತಿಲ್ಲ. ಕಣ್ಣೂರಿನಲ್ಲಿ ಸಂಭವಿಸಿದ ಕೃತಕ ನೆರೆಯನ್ನು ಪರಿಹರಿಸಲಾಗಿದೆ.

ಮಣ್ಣು ತೆರವು: ಡೊಂಗರಕೇರಿ ಕಸ್ಬಾ ಬಝಾರ್ ಸಮಸ್ಯೆ ಪರಿಹರಿಸಲಾಗಿದೆ. ಕುಲಶೇಕರ ಬಳಿಯ ಕೋಟೆಮುರ ಪ್ರದೇಶದ ನೆರೆ ಇಳಿಯಲು ದಾರಿ ನಿರ್ಮಿಸಲಾಗಿದೆ. ಪಂಪ್‌ವಲ್ ಬಳಿ ನೀರಿನ ತಡೆಗೆ ಅಡ್ಡಿಯನ್ನು ನಿವಾರಿಸಲಾಗಿದೆ. ಮುಂಜಾನೆ ಸುರಿದ ಮಳೆಗೆ ಪಡೀಲ್‌ನಲ್ಲಿ ಹರಿಯುತ್ತಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

ವಿಕೋಪ ನಿರ್ವಹಣೆ: ನೋಡಲ್ ಅಧಿಕಾರಿಗಳ ನೇಮಕ

ಸ್ಥಳೀಯ ಕಾರ್ಪೊರೇಷನ್ ವ್ಯಾಪ್ತಿಗೆ ಬರುವ ನೋಡಲ್ ಅಧಿಕಾರಿಗಳ ಹೆಸರು ಮತ್ತು ಪದನಾಮ ವಿವರಗಳು ಇಂತಿವೆ. ಮಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯ್ಕ (9448259312), ಕಲ್ಲಾಪು, ಪೆರ್ಮನೂರ, ಜಪ್ಪಿನಮೊಗರು ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಗುರುರಾಜ್ ಮರಳಿಹಳ್ಳಿ ಇ.ಇ. ಮಂಗಳೂರು (9448837205) ಅವರನ್ನು ಆಯ್ಕೆ ಮಾಡಲಾಗಿದೆ.

ಕುದ್ರೋಳಿ, ಅಳಕೆ, ಬಂದರು, ಕಾರ್‌ಸ್ಟ್ರೀಟ್ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಲಿಂಗೇಗೌಡ ಇ.ಇ. (9449555511), ಕೊಡಿಯಾಲ್‌ಬೈಲ್, ಲಾಲ್‌ಬಾಗ್, ಬಿಜೈ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಗಣೇಶ್ ಇ.ಇ. (9449935900), ಕಂಕನಾಡಿ, ವೆಲೆನ್ಸಿಯಾ, ಪಂಪ್‌ವೆಲ್ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ರವಿಶಂಕರ್ ಎ.ಇ.ಇ. (9341353399) ಅವರನ್ನು ನೇಮಕ ಮಾಡಲಾಗಿದೆ.

ಪಾಂಡೇಶ್ವರ, ಮಂಗಳಾದೇವಿ, ಹೊಯಿಗೆಬಝಾರ್, ಅತ್ತಾವರ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ವಿಶಾಲ್‌ನಾಥ್ ಎ.ಇ.ಇ. (8660114664), ಅಂಗಾರಗುಂಡಿ, ಬೈಕಂಪಾಡಿ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ದೇವರಾಜ್ ಎ.ಇ.ಇ. (7411832998), ಕುಲಶೇಖರ್, ಬಿಕರ್ನಕಟ್ಟೆ, ವಾಮಂಜೂರು ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಅಬ್ದುಲ್ ರೆಹಮನ್ ಎ.ಇ.ಇ. (7760177377) ಅವರನ್ನು ನಿಯೋಜಿಸಲಾಗಿದೆ.

ಕೊಟ್ಟಾರ ಚೌಕಿ ಪ್ರದೇಶಕ್ಕೆ ನೋಡಲ್ ಅಧಿಕಾರಿಯಾಗಿ ಕೈಗಾರಿಕೆ ಮತ್ತು ಬಾಯ್ಲರ್ ಮಂಗಳೂರು ಸಹಾಯಕ ನಿರ್ದೇಶಕ ಪ್ರತಾಪ್ (8105733519), ಆದ್ಯಪಾಡಿ, ಮಳವೂರು, ಬಜ್ಪೆ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ತಾಪಂ ಇಒ ಎ.ರಘು (9480862110), ಆನೆಗುಂಡಿ, ಅಳಕೆ, ಬಿಜೈ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಮನಪಾ ಪರಿಸರ ಅಭಿಯಂತರ ಮಧು (9886403029) ಅವರನ್ನು ಆಯ್ಕೆ ಮಾಡಲಾಗಿದೆ.

ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಉಳ್ಳಾಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀನಿವಾಸ್ ಮೂರ್ತಿ (9480061446), ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯಲ್ಲಿ ಆಯಾ ಪ್ರದೇಶಗಳಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News