ಈದ್ ಸೌಹಾರ್ದತೆ ಸಾರುವ ಹಬ್ಬ: ಕಾಪುವಿನಲ್ಲಿ ಈದ್ ಸಮ್ಮಿಲನ

Update: 2019-06-13 13:33 GMT

ಪಡುಬಿದ್ರಿ: ಈದ್ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಸಾರುವ ಹಬ್ಬ ಎಂದು ಸದ್ಬಾವನಾ ಮಂಚ್‍ನ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಜಮೀಯ್ಯತುಲ್ ಫಲಾಹ್ ಕಛೇರಿಯಲ್ಲಿ ನಡೆದ ಪತ್ರಕರ್ತರೊಂದಿಗೆ ಈದ್ ಸಮ್ಮಿಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ಧರ್ಮದ ಹಬ್ಬಗಳನ್ನು ಎಲ್ಲಾ ಧರ್ಮೀಯರು ಸೇರಿ ಆಚರಿಸಿದಾಗ ವಿವಿಧ ಧರ್ಮಗಳ ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗುತ್ತದೆ ಎಂದ ಅವರು, ಉಪವಾಸ ಆತ್ಮದ ಸಂಸ್ಕರಣೆಗಾಗಿ ಮತ್ತು ದೇಹದ ಪರಿಶೋಧನೆಗಾಗಿ ನಡೆಸುವ ಚಟುವಟಿಕೆಯಾಗಿದೆ. ಈದ್‍ನ ಸಂಭ್ರಮದಲ್ಲಿ ನಡೆಸುವ ಉಪವಾಸವು ಕೇವಲ ಹೊಟ್ಟೆಗೆ ಮಾತ್ರಾ ಸೀಮಿತವಾಗಿರುವಂತದಲ್ಲ. ಬದಲಾಗಿ ಮಾನವನ ದೇಹದ ಪ್ರತೀಯೊಂದು ಅಂಗಾಂಗಳು ಮತ್ತು ಕ್ರಿಯಾ ಚಟುವಟಿಕೆಗಳಿಗೂ ಇದರ ಕರ್ಮಗಳು ಅನ್ವಯವಾಗುತ್ತದೆ ಎಂದು ನುಡಿದರು. 

ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ ಕಟಪಾಡಿ, ಸಮಾಜದ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡುವ ಪತ್ರಕರ್ತರನ್ನು ಕಾಡುವ ಧರ್ಮಗಳ ಆಚರಣೆಯ ಕುರಿತಾದ ವ್ಯತ್ಯಾಸಗಳು ಮತ್ತು ಪದ್ಧತಿಗಳನ್ನು ತಿಳಿಸಿಕೊಡುವಲ್ಲಿ ಈ ಕಾರ್ಯಕ್ರಮ ಅತ್ಯಂತ ಸ್ವಾಗತಾರ್ಹವಾದುದ್ದಾಗಿದೆ ಎಂದರು.

ಜಮೀಯತ್ತುಲ್ ಫಲಾಹ್‍ನ ಅಧ್ಯಕ್ಷ ಶಬ್ಬೀರ್ ಅಹಮ್ಮದ್ ಕಾಝಿ, ಕಾಪು ಪ್ರೆಸ್ ಕ್ಲಬ್‍ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. 
ಜಮಾಅತೆ ಇಸ್ಲಾಮಿ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಂಘಟಕರಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ ವಂದಿಸಿದರು. ಎಸ್.ಐ.ಒ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಶಾರೂಕ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News