ಕಾಪು: ಗದ್ದೆಗಳಲ್ಲಿ ಕೃಷಿ ಚಟುವಟಿಕೆಯಿಂದ ಅಂತರ್ಜಲ ವೃದ್ಧಿ

Update: 2019-06-13 13:35 GMT

ಕಾಪು: ಕಾಪು ವಲಯದಲ್ಲಿ ಹತ್ತುಸಾವಿರ ಗಿಡಗಳನ್ನು ನೆಡುವ ವ್ಯವಸ್ಥೆ ಮಾಡಲಾಗಿದ್ದು, ಪ್ರತೀ ಪಂಚಯತ್ ವ್ಯಾಪ್ತಿಯಲ್ಲಿ 500 ಗಿಡಗಳನ್ನು ಅರಣ್ಯ ಇಲಾಖೆಯಿಂದ ನೆಡಲಾಗುವುದು ಎಂದು ಕಾಪು ವಲಯ ಉಪರಣ್ಯಾಧಿಕಾರಿ ನಾಗೇಶ ಬಿಲ್ಲವ ನುಡಿದರು.

ಅವರು ಗುರುವಾರ ಅರಣ್ಯ ಇಲಾಖೆ ಹಾಗೂ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್ ಕ್ಲಬ್ ಮುಂಭಾಗದಲ್ಲಿ ಗಿಡಗಳನ್ನು ನೆಡುವ ಮೂಲಕ ಮನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಗದ್ದೆಗಳನ್ನು ಹಡಿಲು ಬಿಡದೆ ನಾಟಿ, ಕೃಷಿ ಮಾಡುವುದು ಅಥವಾ ಗಿಡಮರಗಳನ್ನು ಬೆಳೆಸುವುದರಿಂದ ಅಂತರ್ಜಲ ವೃದ್ಧಿಯಾಗಿ ಸುಂದರ ಜೀವನಕ್ಕೆ ಅವಕಾಶ ಸಿಗುತ್ತದೆ. ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇರುವುದು ಗಿಡಮರಗಳಿಗೆ ಮಾತ್ರ. ಶಾಶ್ವತ ಜೀವ ರಕ್ಷಕಗಳಾದ ಸಸ್ಯ ಸಂಪತ್ತನ್ನು ವ್ರದ್ಧಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಪು ತಾಲೂಕು ಸಂಘದ ಅಧ್ಯಕ್ಷ ಪ್ರಮೋದ್ ಸುವರ್ಣ, ಕಾರ್ಯದರ್ಶಿ ವಾದಿರಾಜ್ ನಡಿಮನೆ, ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ ಉಚ್ಚಿಲ, ಅರಣ್ಯ ರಕ್ಷಕರಾದ ಮಂಜುನಾಥ್, ಅಭಿಲಾಶ್, ಬಿಕ್ಕೊ ಕಂಪನಿಯ ಪ್ರಬಂಧಕ ಯೋಗೀಶ ಎನ್ ಸುವರ್ಣ, ಸಿಬ್ಬಂದಿಗಳು, ಕಾಪು ವಲಯ ಪತ್ರಕರ್ತರು ಉಪಸ್ಥಿತರಿದ್ದರು. ಬಿ.ಪುಂಡಲೀಕ ಮರಾಠೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಮೋದ್ ಸುವರ್ಣ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News