ಮಣಿಪಾಲ: ಹೊಸ ಶಿಕ್ಷಣ ನೀತಿ ಕುರಿತು ಉಪನ್ಯಾಸ

Update: 2019-06-13 14:36 GMT

ಉಡುಪಿ, ಜೂ.13: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ‘ಹೊಸ ಶಿಕ್ಷಣ ನೀತಿಯ ಕರಡು’ ವಿಷಯದ ಕುರಿತು ವಿಶೇಷ ಉಪನ್ಯಾಸ ವೊಂದು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ಆಶ್ರಯದಲ್ಲಿ ಜೂ.14ರ ಅಪರಾಹ್ನ 3:30ಕ್ಕೆ ನಡೆಯಲಿದೆ.

ಖ್ಯಾತ ಅರ್ಥಶಾಸ್ತ್ರಜ್ಞರೂ, ಪಾಲಿಸಿ ರಿಸರ್ಚ್ ಹಾಗೂ ನಾಲೇಡ್ಜ್ ಮ್ಯಾನೇಜ್ಮೆಂಟ್ ಪರಿಣಿತರಾದ ಡಾ.ರಶ್ಮಿ ಭಾಸ್ಕರನ್ ಅವರು ಈ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಉಪನ್ಯಾಸ ಕಾರ್ಯಕ್ರಮ ಜೂ.14ರ ಅಪರಾಹ್ನ 3:30ಕ್ಕೆ ಮಣಿಪಾಲದ ಹಳೆ ಟ್ಯಾಪ್ಮಿ ಕಟ್ಟಡದಲ್ಲಿರುವ ಸರ್ವೋದಯ ಹಾಲ್ನಲ್ಲಿ ನಡೆಯಲಿದೆ ಎಂದು ಗಾಂಧಿಯನ್ ಸೆಂಟರ್‌ನ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News