×
Ad

ದಲಿತ ಯುವಕನ ಬೆತ್ತಲೆ ಮೆರವಣಿಗೆ: ದಸಂಸ ಒಕ್ಕೂಟ ಖಂಡನೆ; ಪ್ರತಿಭಟನೆ

Update: 2019-06-13 20:13 IST

ಉಡುಪಿ, ಜೂ.13: ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದ ದಲಿತ ಯುವಕ ದೇವಸ್ಥಾನದಲ್ಲಿ ಮಲಗಿ ಅಪವಿತ್ರಗೊಳಿಸಿದನೆಂಬ ಹಿನ್ನಲೆಯಲ್ಲಿ ಆತನ ಮೇಲೆ ಸುಳ್ಳು ಆರೋಪ ಹೊರಿಸಿ ಆತನ ಬಟ್ಟೆ ಬಿಚ್ಚಿ ಬೆತ್ತಲೆ ಮೆರವಣಿಗೆ ಮಾಡಿರುವ ಅಮಾನವೀಯ ಕೃತ್ಯವನ್ನು ಉಡುಪಿ ಜಿಲ್ಲೆ ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಘಟನೆಯನ್ನು ಖಂಡಿಸಿ ಉಡುಪಿ ಜಿಲ್ಲಾ ದಲಿತ ಸಂಘಟನಾ ಒಕ್ಕೂಟ ಜೂ. 15ರ ಶನಿವಾರ ಸಂಜೆ 5  ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News