ಪೌರತ್ವ ಪಟ್ಟಿಯಲ್ಲಿ ಹೆಸರು ಸೇರಿಸಲು ಲಂಚ: ಎನ್ಆರ್ ಸಿಯ ಅಧಿಕಾರಿಗಳ ಬಂಧನ

Update: 2019-06-13 15:36 GMT

ಗುವಹಾತಿ, ಜೂ.13: ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಲಂಚ ಸ್ವೀಕರಿಸುತ್ತಿದ್ದ ಎನ್‌ಆರ್‌ಸಿಯ ಇಬ್ಬರು ಅಧಿಕಾರಿಗಳನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರ.

 ಪೊಲೀಸರ ಪ್ರಕಾರ, ಗುಹಾವತಿ ನಿವಾಸಿ ಮಹಿಳೆ ಕಜಾರಿ ಘೋಶ್ ದತ್ತಾ ಅವರ ಎನ್‌ಆರ್‌ಸಿ ಅರ್ಜಿಯಲ್ಲಿದ್ದ ತಾಂತ್ರಿಕ ಲೋಪಗಳನ್ನು ಸರಿಪಡಿಸಲು ಇಲ್ಲಿನ ದಿಸ್ಪುರ್ 8ನ ಗಣೇಶ್‌ಗುರಿಯಲ್ಲಿರುವ ಎನ್‌ಆರ್‌ಸಿ ಸೇವಾ ಕೇಂದ್ರದ ಅಧಿಕಾರಿ ಸೈಯದ್ ಶಹಜಹಾನ್ 10,000ರೂ. ಲಂಚದ ಬೇಡಿಕೆಯಿಟ್ಟಿದ್ದ. ಈ ಬಗ್ಗೆ ವಿಚಕ್ಷಣ ಮತ್ತು ಭ್ರಷ್ಟಾಚಾರ ವಿರೊಧಿ ನಿರ್ದೇಶನಾಲಯದಲ್ಲಿರುವ ಅಸ್ಸಾಂ ಭ್ರಷ್ಟಾಚಾರ ನಿಯಂತ್ರಣ ಮಂಡಳಿಯಲ್ಲಿ ದತ್ತ ದೂರು ದಾಖಲಿಸಿದ್ದರು. ಗುರುವಾರದಂದು ಆರೋಪಿಯನ್ನು ಹಿಡಿಯಲು ಬಲೆ ಹೆಣೆದ ಅಧಿಕಾರಿಗಳು ದತ್ತಾ ಅವರು ಲಂಚದ ಮೊತ್ತ ಪಾವತಿಸುತ್ತಿರುವಾಗಲೇ ಶಹಜಹಾನ್‌ನನ್ನು ಬಂಧಿಸಿದ್ದಾರೆ.

ಶಹಜಹಾನ್ ಜೊತೆ ಕೈಜೋಡಿಸಿದ ಇನ್ನೋರ್ವ ಅಧಿಕಾರಿ ರಾಹುಲ್ ಪರಾಶರ್ ವಿರುದ್ಧವೂ ಮಹಿಳೆ ದೂರು ದಾಖಲಿಸಿದ್ದು ಆತನನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೂರುದಾರೆ ನೀಡಿದ ಲಂಚದ ಮೊತ್ತ ಹಾಗೂ ಇತರ ಕೆಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News