ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಕ್ರಮ

Update: 2019-06-13 16:01 GMT

ಮಲ್ಪೆ, ಜೂ.13: ಪ್ರವಾಸಿ ತಾಣ ಮಲ್ಪೆ ಬೀಚ್‌ನಲ್ಲಿ ಸಂಜೆ ವೇಳೆ ಅಲೆಗಳ ಅಬ್ಬರ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯು ಕ್ರಮಕೈಗೊಂಡಿದೆ.

ಮಳೆಗಾಲದಲ್ಲೂ ಹೊರ ರಾಜ್ಯ ಹಾಗೂ ಹೊರಜಿಲ್ಲೆಯ ಪ್ರವಾಸಿಗರು ಮಲ್ಪೆ ಬೀಚ್‌ಗೆ ಬರುತ್ತಿರುವ ಹಿನ್ನೆಲೆಯಲ್ಲಿ ಯಾರು ನೀರಿಗೆ ಇಳಿಯದಂತೆ ಬೀಚ್‌ನ ಸುಮಾರು ಒಂದು ಕಿ.ಮೀ. ಉದ್ದಕ್ಕೆ ಬಲೆಯನ್ನು ಅಡ್ಡವಾಗಿ ಕಟ್ಟ ಲಾಗುತ್ತಿದೆ. ಅದರಿಂದ ಆಚೆಗೆ ಪ್ರವಾಸಿಗರು ಹೋಗದಂತೆ ಎಚ್ಚರ ವಹಿಸ ಲಾಗಿದೆ.

ಅಲೆಗಳ ಅಬ್ಬರದಿಂದ ಬೀಚ್ ಮುಂದೆ ಬರುತ್ತಿದ್ದು, ಈ ನಿಟ್ಟಿನಲ್ಲಿ ತೀರದಲ್ಲಿ ಬೀಚ್ ಸೌಂದರ್ಯಕ್ಕೆ ಅಳವಡಿಸಲಾದ ಎಂಟು ಹಟ್‌ಗಳನ್ನು ತೆರವುಗೊಳಿಸ ಲಾಗುತ್ತಿದೆ. ಬೀಚ್‌ನ ಉತ್ತರ ಭಾಗದಲ್ಲಿ ಹಾಕಲಾದ ಕಲ್ಲಿನ ತಡೆಗೋಡೆಗೆ ಅಲೆಗಳು ಬಡಿಯುತ್ತಿದ್ದು, ಯಾವುದೇ ಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಅದೇ ರೀತಿ ಮಲ್ಪೆ ಬಂದರಿನ ಅಳಿವೆ ಬಾಗಿಲಿನಲ್ಲಿರುವ ಸೀ ವಾಕ್‌ಗೆ ಪ್ರವಾಸಿಗರ ಪ್ರವೇಶವನ್ನು ಮುಂದುವರೆಸಿದ್ದು, ಈವರೆಗೆ ಯಾವುದೇ ನಿಷೇಧ ಹೇರಿಲ್ಲ. ಆದರೆ ಅಲ್ಲಿ ನೀರಿಗೆ ಇಳಿಯುವುದನ್ನು ಸಮಿತಿ ನಿಷೇಧಿಸಿದೆ. ಈ ಬಗ್ಗೆ ಎಲ್ಲ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಮಿತಿಯ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News