×
Ad

ಬಂಟ್ವಾಳ: ರಾಜ್ಯ ಸರಕಾರಿ ನೌಕರರ ಸಂಘದಿಂದ ನೂತನ ಕಾರ್ಯಕಾರಿ ಸಮಿತಿಗೆ ಚುನಾವಣೆ

Update: 2019-06-13 22:25 IST

ಬಂಟ್ವಾಳ, ಜೂ. 13: ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ಇದರ 2019 -2024ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿ ಚುನಾವಣೆಯು ಗುರುವಾರ ಬಿ.ಸಿ.ರೋಡ್‍ನಲ್ಲಿರುವ ಸರಕಾರಿ ನೌಕರರ ಭವನದಲ್ಲಿ ನಡೆಯಿತು.

ಪ್ರಾಥಮಿಕ ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಈ ಚುನಾವಣೆ ನಡೆದಿದ್ದು, ಕಂದಾಯ ಇಲಾಖೆಗೆ 2 ಪ್ರತಿನಿಧಿಗಳು ಆಯ್ಕೆಯಾಗಬೇಕಿದ್ದು, 5 ಅಭ್ಯರ್ಥಿಗಳು ಕಣದಲ್ಲಿದ್ದರು. ಅದೇ ರೀತಿ ಪ್ರಾಥಮಿಕ ಶಿಕ್ಷಣ ಇಲಾಖೆಗೆ 3 ಪ್ರತಿನಿಧಿಗಳು ಆಯ್ಕೆಯಾಗಬೇಕಿದ್ದು, 4 ಅಭ್ಯರ್ಥಿಗಳು ಕಣದಲ್ಲಿದ್ದರು.

ಫಲಿತಾಂಶ:

ಶಿಕ್ಷಣ ಇಲಾಖೆಯ ದೊಡ್ಡ ಕೆಂಪಯ್ಯ, ಪ್ರಾನ್ಸಿಸ್ ಡೇಸಾ, ರವಿಕುಮಾರ್, ಸಂತೋಷ ಕುಮಾರ್ ಹಾಗೂ ಕಂದಾಯ ಇಲಾಖೆಯ ಸೀತಾರಾಮ್, ಜೆ.ಜನಾರ್ಧನ, ಮಲ್ಲೇಶ್, ಮಂಜುನಾಥ್, ತೌಫೀಕ್ ಕಣದಲ್ಲಿದ್ದರು. ಕಂದಾಯ ಇಲಾಖೆಯಿಂದ ಜನಾರ್ದನ ಮತ್ತು ಮಂಜುನಾಥ ಹಾಗೂ ಶಿಕ್ಷಣ ಇಲಾಖೆಯಿಂದ ಫ್ರಾನ್ಸಿಸ್ ಡೇಸಾ, ರವಿಕುಮಾರ್ ಮತ್ತು ಸಂತೋಷ್ ಕುಮಾರ್ ಆಯ್ಕೆಗೊಂಡಿದ್ದಾರೆ.

ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ನಾಯಕ್ ರಾಯಿ ಹಾಗೂ ಮತಗಟ್ಟೆ ಅಧಿಕಾರಿಯಾಗಿ ಮುಖ್ಯೋಪಾಧ್ಯಾಯ ಭಾಸ್ಕರ್ ರಾವ್ ಕಾರ್ಯ ನಿರ್ವಹಿಸಿದರು. ಜೂ. 27ರಂದು ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ನೂತನ ಪದಾಧಿಕಾರಿ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News