ತುಂಬೆ ಡ್ಯಾಂ ಟ್ರಾನ್ಸ್ ಫಾರ್ಮರ್‌ಗೆ ಸಿಡಿಲು: ಮಂಗಳೂರಿಗೆ ದಿನ ಬಿಟ್ಟು ದಿನ ನೀರು ಸರಬರಾಜು

Update: 2019-06-13 17:10 GMT

ಮಂಗಳೂರು, ಜೂ.13: ಮಂಗಳೂರು ಮಹಾನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನ ಟ್ರಾನ್ಸ್ ಫಾರ್ಮರ್‌ ಗೆ ಸಿಡಿಲಿನಿಂದ ಹಾನಿಯಾಗಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ನಗರಕ್ಕೆ ದಿನ ಬಿಟ್ಟು ದಿನ ನೀರು ಸರಬರಾಜು ಆಗಲಿದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ನಗರದಲ್ಲಿ ಸುರಿದ ಗುಡುಗು ಸಹಿತ ಮಳೆಗೆ ಮಹಾನಗರ ಪಾಲಿಕೆಯ ಪಡೀಲ್‌ನಲ್ಲಿರುವ ನೆಲಮಟ್ಟದ ಮುಖ್ಯ ಜನ ಸಂಗ್ರಹಾರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಉತ್ತುಂಗ ಸ್ಥಾವರ ನಂಬರ್-2ಕ್ಕೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ ಫಾರ್ಮರ್‌ಗೆ ಸಿಡಿಲಿನಿಂದ ಹಾನಿಯಾಗಿದೆ.

ತುರ್ತಾಗಿ ದುರಸ್ತಿ ಮಾಡುವ ಕಾರ್ಯಪ್ರಗತಿಯಲ್ಲಿದ್ದು, ದುರಸ್ತಿ ಕಾರ್ಯ ಮುಗಿಯುವವರೆಗೆ ನಗರವ್ಯಾಪ್ತಿ ಮತ್ತು ಸುರತ್ಕಲ್ ಪ್ರದೇಶಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಪ್ರತಿ ವಿಭಾಗಕ್ಕೆ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News