×
Ad

ಆತೂರು: ಆಯಿಶಾ ಶಾಲಾ ಪ್ರಾರಂಭೋತ್ಸವ

Update: 2019-06-14 18:05 IST

ಪುತ್ತೂರು, ಜೂ.14: ಆತೂರಿನ ಆಯಿಶಾ ವಿದ್ಯಾಲಯದ ಪೂರ್ವ ಪ್ರಾರ್ಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಪ್ರಾರಂಭೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಸಿದ್ದೀಕ್ ಬ್ಯಾರಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅನುಪಮಾ ಮಹಿಳಾ ಮಾಸಿಕದ ಸಹ ಸಂಪಾದಕಿ ಸಬೀಹ ಫಾತಿಮಾ ಮಾತನಾಡಿ, ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇದೇ ಸಂದರ್ಭ ಕಳೆದ ಸಾಲಿನಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.

 ಆಯಿಶಾ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಡಾ.ಅಬ್ದುಲ್ ಮಜೀದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಅಬ್ದುಲ್ಲಾ ಮೋನು ಮೊಹಿದ್ದಿನ್ ಕತರ್, ಕೆಎಂಸಿ ವೈದ್ಯಕೀಯ ವಿದ್ಯಾರ್ಥಿನಿ ಸಮೀಹ ಶಾದ್, ಅಬ್ದುರ್ರಶೀದ್, ಆಯಿಶಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಅಮೀನ್ ಅಹ್ಸನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಶಾಲಾ ಮುಖ್ಯ ಶಿಕ್ಷಕಿ ಆಯಿಶಾ ಫರ್ಝಾನ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಲೀಲ್ ಮುಕ್ರಿ ವಂದಿಸಿ ದರು. ಶಿಕ್ಷಕಿರಾದ ಅಫ್ರತ್ ಮತ್ತು ರಮ್ಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News