ಮಂಗಳೂರು: ಮದ್ರಸ ಪುಸ್ತಕ ಮೇಳಕ್ಕೆ ಚಾಲನೆ

Update: 2019-06-14 12:46 GMT

ಮಂಗಳೂರು, ಜೂ.14: ಶಂಸುಲ್ ಉಲಮಾ ಪಬ್ಲಿಕೇಶನ್‌ನ ಎಂ.ಆರ್.ಬುಕ್‌ಸ್ಟಾಲ್ ಮಂಗಳೂರು ಅಧೀನದಲ್ಲಿ ಕಳೆದ 14 ವರ್ಷಗಳಿಂದ ಮಂಗಳೂರಿನ ಸ್ಟೇಟ್‌ಬ್ಯಾಂಕ್ ಬಳಿಯ ಪಯೊನೀರ್ ಕಾಂಪ್ಲೆಕ್ಸಿನಲ್ಲಿ ಮದ್ರಸ ಪ್ರಾರಂಭೋತ್ಸವದ ಭಾಗವಾಗಿ ಶುಕ್ರವಾರ ಮದ್ರಸಾ ಪುಸ್ತಕ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮದ್ರಸ ಅಧ್ಯಾಪಕರಿಗೆ ಮುಂದಿನ ವರ್ಷದಿಂದ ಗೌರವ ವೇತನ ಸಿಗುವ ಬಗ್ಗೆ ಪ್ರಯತ್ನಿಸುತ್ತಿದ್ದೇನೆ. ಎಂ.ಆರ್ ಆಯೋಜಿಸಿದ ಪುಸ್ತಕ ಮೇಳ ಮದ್ರಸ ಅಧ್ಯಾಪಕರಿಗೆ, ಆಡಳಿತ ಕಮಿಟಿಯ ಪದಾಧಿಕಾರಿ ಹಾಗೂ ಮದ್ರಸ ವಿದ್ಯಾರ್ಥಿ-ವಿದ್ಯಾಥಿನಿಯರ ಭವಿಷ್ಯ ರೂಪಿಸುವಲ್ಲಿ ಪುಸ್ತಕ ಮೇಳ ಯಶಸ್ವಿಯಾಗಲಿ ಎಂದರು.

ಈ ಸಂದರ್ಭ ಕುಕ್ಕಿಲ ದಾರಿಮಿ, ಇಬ್ರಾಹೀಂ ಬಾಖವಿ, ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಅಶ್ರಫ್ ಮಾರಾಟಿಮೂಲೆ, ಅಲ್ಮಾಝ್ ಮಾಲಿಕ್, ಎ.ಎಚ್. ನೌಶಾದ್ ಹಾಜಿ ಸೂರಲ್ಪಾಡಿ, ರಿಯಾಝುದ್ದೀನ್ ಹಾಜಿ, ಸಿತಾರ್ ಮಜೀದ್ ಹಾಜಿ, ಡಿಲೆಕ್ಸ್ ಅಹ್ಮದ್ ಹಾಜಿ, ಬಿ.ಎಸ್ ಹುಸೈನ್ ಹಾಜಿ, ಹಮೀದ್ ಹಾಜಿ ಮಕ್ಕ, ನಿಸಾರ್ ಮಲಾರ್, ರವಿಚಂದ್ರ ಗಟ್ಟಿ ಉಳ್ಳಾಲ, ಗೋಪಾಲ್ ಶೆಟ್ಟಿ ಕದ್ರಿ, ಅಬ್ದುಲ್ಲಾ ಹಾಜಿ ಸುರಿಬೈಲು, ಮುಹಮ್ಮದ್ ಹಾಜಿ ಪೆರುವಾಯಿ, ಇಕ್ಬಾಲ್ ಹಾಜಿ, ಮುಸ್ತಫ ಫೈಝಿ ಪರ್ಲಡ್ಕ, ಇಕ್ಬಾಲ್ ಉಪ್ಪಳ, ನಿಸಾರ್ ಮಂಗಳೂರು, ಶೈಖ್ ಹಾಜಿ ಆಕರ್ಷನ್, ಹಮೀದ್ ಹಾಜಿ ಬೆಂಗರೆ, ಸಿನಾನ್ ಅಜ್ಜಾವರ, ಜಲೀಲ್ ಖುತುಬಿ ಬುಡೋಳಿ, ಸಲೀಂ ಯಮಾನಿ ಬೋಳಂತೂರು, ಇರ್ಫಾನ್ ಕಿನ್ಯ, ಪಿ.ಎ ಇಬ್ರಾಹೀಂ, ರಝಾಕ್ ಸಿಸ್ಟೇಕ್, ನಝೀರ್ ಪಯೊನೀರ್, ರವೂಫ್ ಆಕರ್ಷನ್, ಶೈಖ್ ಅಬ್ದುಲ್ಲಾ ಬಜಪೆ, ಶಾಹುಲ್ ಹಮೀದ್ ಖುತುಬಿ ಐರರ್ನಾಡು, ಹಸೈನಾರ್ ಉಸ್ತಾದ್, ನಾಸಿರ್ ಉಸ್ತಾದ್ ಬೊಳ್ಳೂರು, ಅಲ್ಫಾಝ್ ಬೆಂಗರೆ, ಉಮರ್ ದಾರಿಮಿ ಸಾಲ್ಮರ, ಟಿ.ಎಂ ಹನೀಫ್ ಮುಸ್ಲಿಯಾರ್, ಹುಸೈನ್ ಹಾಜಿ, ಮದನಿ ಉಸ್ತಾದ್, ಶರೀಫ್ ಅಝ್‌ಹರಿ ವಾದಿಸ್ಸಲಾಮಃ, ಇಮ್ರಾನ್ ಅಝ್‌ಹರಿ ಕಿನ್ಯ, ಇಸ್‌ಹಾಖ್ ಉಳ್ಳಾಲ, ಪಿ.ಜಿ ಹಮೀದ್ ಮೌಲವಿ ಬಿ.ಸಿ. ರೋಡ್, ಬಶೀರ್ ಜ್ಯೂಸ್ ಸೆಂಟರ್, ಹಸೈನಾರ್ ಪಾವೂರು ಉಪಸ್ಥಿತರಿದ್ದರು. ವ್ಯವಸ್ತಾಪಕ ಮುಸ್ತಫಾ ಫೈಝಿ ಸ್ವಾಗತಿಸಿದರು. ರಫೀಕ್ ಅಜ್ಜಾವರ ವಂದಿಸಿದರು.

ಜುಲೈ 15ರ ತನಕ ನಡೆಯುವ ಪುಸ್ತಕ ಮೇಳ ಪ್ರತೀ ದಿನ ಬೆಳಗ್ಗೆ 8ರಿಂದ ಸಂಜೆ 7ರವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News