ಸಂತ ಅಲೋಶಿಯಸ್ ಶಾಲಾ ಮಂತ್ರಿಮಂಡಲ ಉದ್ಘಾಟನೆ

Update: 2019-06-14 12:48 GMT

ಮಂಗಳೂರು, ಜೂ.14: ಸಂತ ಅಲೋಶಿಯಸ್ ಕಾಲೇಜಿನ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿಮಂಡಲದ ಉದ್ಘಾಟನೆಯು ಗುರುವಾರ ಶಾಲಾಭವನದಲ್ಲಿ ಜರುಗಿತು.

ಪ್ರಜಾಪ್ರಭುತ್ವ ಕಲ್ಪನೆಯನ್ನು ಮೂಡಿಸಲು ವಿದ್ಯಾರ್ಥಿಗಳಿಂದ ಆಯ್ಕೆಯಾದ ಶಾಲಾ ನಾಯಕ ಈಶಾನ್ ಪಿ.ಬಿ. ಹಾಗೂ ಡಾಲ್ಮಿಯ ಡೆನ್ನಿಸ್ ಕೆ. ಮತ್ತು ಇತರ ಮಂತ್ರಿಗಳಿಗೆ ಪ್ರತಿಜ್ಞಾ ವಿಧಿ ಹಾಗೂ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಂ.ಫಾ. ಜೆರಾಲ್ಡ್ ಪುರ್ಟಾದೊ ವಹಿಸಿದ್ದರು.  

ಮುಖ್ಯ ಶಿಕ್ಷಕಿ ಫಿಲೋಮಿನಾ ಲೂವಿಸ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಗ್ರೇಸ್ ಮಿನೇಜಸ್ ಶಾಲಾ ಮಂತ್ರಿಮಂಡಲದ ಪ್ರಾಮುಖ್ಯತೆ ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ರೇಖಾ ೆರ್ನಾಂಡಿಸ್, ಸಂಘದ ಸದಸ್ಯೆ ಮಂಗಳಾ ರೈ ಮುಖ್ಯ ಅತಿಥಿಯಾಗಿದ್ದರು. ಗೋರ್ಡಾನ್ ಮತ್ತು ಶೋನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News