ಜೂ. 16: ಅಲ್ ಬಿರ್ರ್ ಇಸ್ಲಾಮಿಕ್ ಪ್ರೀ ಸ್ಕೂಲ್‍ ಉದ್ಘಾಟನೆ

Update: 2019-06-14 13:54 GMT

ಬಂಟ್ವಾಳ, ಜೂ. 14: ವಿಟ್ಲ ಸಮೀಪದ ಪರ್ತಿಪ್ಪಾಡಿ ಎಂಬಲ್ಲಿ ನೂತನವಾಗಿ ಪ್ರಾರಂಭಿಸಲಾದ ಅಲ್ ಬಿರ್ರ್ ಇಸ್ಲಾಮಿಕ್ ಪ್ರೀ ಸ್ಕೂಲ್‍ನ ಉದ್ಘಾಟನಾ ಸಮಾರಂಭ ಜೂ. 16ರ ಸಂಜೆ ನಡೆಯಲಿದೆ.

ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಕೆ.ಎ ಹಿದಾಯತುಲ್ಲಾ ಶಾಲಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಕೆ.ಎಸ್ ಸೈಯದ್ ಮುಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ತರಗತಿಯನ್ನು ಉದ್ಘಾಟಿಸಲಿದ್ದಾರೆ. ವಿಟ್ಲ ಎನ್ ಅಬ್ದುಲ್ಲ ಕುಂಞÂ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಇ.ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಸರಗೋಡು ಅಲ್ ಬಿರ್ರ್‍ನ ಕೋ ಆರ್ಡಿನೇಟರ್ ಜಾಬಿರ್ ಹುದವಿ ಉಪಸ್ಥಿತರಿರುವರು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News