ಬಳ್ಳಾರಿ ಮೂಲದ ಯುವತಿ ನಾಪತ್ತೆ

Update: 2019-06-14 14:10 GMT
ಗಂಗಮ್ಮ

ಮಂಗಳೂರು, ಜೂ.14: ನಗರದ ಬಜಾಲ್ ಚರ್ಚ್ ಬಳಿಯ ಬಾಡಿಗೆ ಮನೆಯಿಂದ ಹೊರಗೆ ಹೋದ ಯುವತಿಯೊಬ್ಬರು ನಾಪತ್ತೆಯಾಗಿದ್ದಾರೆ.
ಬಳ್ಳಾರಿ ಹೂವಿನಹಡಗಲಿ ಹಗರಿಬೊಮ್ಮನಹಳ್ಳಿ ನಿವಾಸಿ ಗಂಗಮ್ಮ (18) ನಾಪತ್ತೆಯಾದವರು.

ಇವರು ಜೂ.12ರಂದು ಬೆಳಗ್ಗೆ 10ಗಂಟೆಗೆ ಬಜಾಲ್ ಚರ್ಚ್ ಬಳಿಯ ಬಾಡಿಗೆ ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಎಲ್ಲ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ಎತ್ತರ 5.8, ಎಣ್ಣೆ ಮೈ ಬಣ್ಣ, ಸಾಧಾರಣ ಮೈಕಟ್ಟು, ಬಟ್ಟೆ ಮೆರುನ್ ಕಲರ್ ಸೀರೆ ಧರಿಸಿದ್ದು, ಕಾಲಲ್ಲಿ ಬೆಳ್ಳಿ ಚೈನ್ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News