ಮಣಿಪಾಲ: ವಿಶ್ವರಕ್ತದಾನ ದಿನಕ್ಕೊಂದು ಕಲಾಕೃತಿ

Update: 2019-06-14 15:45 GMT

ಮಣಿಪಾಲ: ವಿಶ್ವ ರಕ್ತದಾನ ದಿನಕ್ಕೊಂದು ಕಲಾಕೃತಿ ಮಣಿಪಾಲ, ಜೂ.14: ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯ ಸಹಯೋಗದಲ್ಲಿ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಕಲಾವಿದರಾದ ಶ್ರೀನಾಥ್ ಮಣಿಪಾಲ ಮತ್ತು ರವಿ ಹಿರೆಬೆಟ್ಟು ಇವರು ರಕ್ತದಾನದ ಬಗ್ಗೆ ಅರಿವು ಮೂಡಿಸುವ ಹಾಗೂ ರಕ್ತದಾನಕ್ಕೆ ಪ್ರೇರಣೆ ನೀಡುವ ವಿಶಿಷ್ಟ ಕಲಾಕೃತಿಯೊಂದನ್ನು ರಚಿಸಿ ಪ್ರದರ್ಶಿಸಿದರು.

ಈ ಕಲಾಕೃತಿಯನ್ನು ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಸಿಓಓ ಸಿ.ಜಿ.ಮುತ್ತಣ್ಣ ಅನಾವರಣಗೊಳಿಸಿದರು. ಈ ಕಲಾಕೃತಿಯನ್ನು ಪರಿಸರ ಸ್ನೇಹಿ ಸಲಕರಣೆಗಳಾದ ರಟ್ಟು, ಕಾಗದ ಮುಂತಾದ ವಸ್ತುಗಳನ್ನು ಬಳಸಿ ರಚಿಸಲಾಗಿದೆ.

ಈ ಕಲಾಕೃತಿಯನ್ನು ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಸಿಓಓ ಸಿ.ಜಿ.ಮುತ್ತಣ್ಣ ಅನಾವರಣಗೊಳಿಸಿದರು. ಈ ಕಲಾಕೃತಿಯನ್ನು ಪರಿಸರ ಸ್ನೇಹಿ ಸಲಕರಣೆಗಳಾದ ರಟ್ಟು, ಕಾಗದ ಮುಂತಾದ ವಸ್ತುಗಳನ್ನು ಬಳಸಿ ರಚಿಸಲಾಗಿದೆ. ಇದರಲ್ಲಿ ರಕ್ತದಾನಿಯನ್ನು ಮತ್ತು ರಕ್ತ ಸ್ವೀಕರಿಸುವವರನ್ನು ಒಂದೇ ಮುಖ ದಲ್ಲಿ ಮತ್ತು ಇನ್ನೊಂದು ಜೀವವು ರಕ್ತದಾನಿಯನ್ನು ಯಾವ ರೀತಿ ಅವಲಂಬಿಸಿದೆ ಎನ್ನುವುದನ್ನು ಪ್ರತಿಬಿಂಬಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News