ವೈದ್ಯರ ಮುಷ್ಕರ: ನವಜಾತ ಶಿಶು ಬಲಿ

Update: 2019-06-14 16:28 GMT

ಕೋಲ್ಕತಾ, ಜೂ. 14: ರಾಜ್ಯದಲ್ಲಿ ವೈದ್ಯರ ಪ್ರತಿಭಟನೆಯ ನಡುವೆ ಅಗರ್ಪಾರಾದಲ್ಲಿ ಗುರುವಾರ ವೈದ್ಯರ ನಿರ್ಲಕ್ಷಕ್ಕೆ ನವಜಾತ ಶಿಶುವೊಂದು ಬಲಿಯಾಗಿದೆ. ‘‘ಇದು ನನ್ನ ದುರದೃಷ್ಟ. ಚಿಕಿತ್ಸೆ ಲಭ್ಯವಾಗದೆ ನನ್ನ ಮಗು ಮೃತಪಟ್ಟಿದೆ. ಮುಷ್ಕರದ ಕಾರಣಕ್ಕೆ ಯಾವೊಬ್ಬ ವೈದ್ಯರು ಕೂಡ ನನ್ನ ಮಗುವಿಗೆ ಚಿಕಿತ್ಸೆ ನೀಡಲು ಮುಂದೆ ಬರಲಿಲ್ಲ’’ ಎಂದು ಮಗುವಿನ ತಂದೆ ಅಭಿಜಿತ್ ಮಲ್ಲಿಕ್ ಹೇಳಿದ್ದಾರೆ.

ಜೂನ್ 11ರಂದು ಮಗು ಜನಿಸಿತ್ತು. ಅದಕ್ಕೆ ಉಸಿರಾಟದ ತೊಂದರೆ ಇತ್ತು. ಜೂನ್ 12ರಂದು ಅದರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಮಕ್ಕಳ ತಜ್ಞರು ಇರುವ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ಯುವಂತೆ ವೈದ್ಯರು ಹೇಳಿದರು. ನಾನು ಹಲವು ಆಸ್ಪತ್ರೆಗೆ ಹೋದೆ. ಆದರೆ, ಮುಷ್ಕರದಿಂದಾಗಿ ಯಾವೊಬ್ಬ ವೈದ್ಯ ಕೂಡ ನನ್ನ ಮಗುವಿಗೆ ಚಿಕಿತ್ಸೆ ನೀಡಲಿಲ್ಲ. ಇದರಿಂದಾಗಿ ಜೂನ್ 30ರಂದು ಮಗು ಮೃತಪಟ್ಟಿತು ಎಂದು ಮಲ್ಲಿಕ್ ಹೇಳಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ನನ್ನ ಕರೆ ಪ್ರತಿಕ್ರಿಯೆ ನೀಡಿಲ್ಲ ಎಂದು ಮಲ್ಲಿಕ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News