ಉಡುಪಿ: ಜಿಲ್ಲೆಯಲ್ಲಿ ಸಿಆರ್‌ಝಡ್ ಮರಳು ದಿಬ್ಬ ತೆರವು ನಿಷೇಧ

Update: 2019-06-14 16:32 GMT

ಉಡುಪಿ, ಜೂ.14: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ 2018-19ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ 45 ಮಂದಿ ಸ್ಥಳೀಯ ಸಾಂಪ್ರದಾಯಿಕ ಮರಳು ಪರವಾನಿಗೆದಾರರಿಗೆ ಪರವಾನಿಗೆ ನೀಡಿ ಮರಳು ದಿಬ್ಬ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ನಿಗದಿ ಪಡಿಸಿರುವ ಪ್ರಮಾಣವು ಮುಗಿದಿದೆ.

ಕರಾವಳಿ ಜಿಲ್ಲೆಗಳಲ್ಲಿ ಜೂನ್ 1ರಿಂದ ಜುಲೈ 31ರವರೆಗೆ ಮೀನುಗಾರಿಕೆ ನಿಷೇಧವಿರುವುದರಿಂದ ಈ ಅವಧಿಯಲ್ಲಿ ಸಿಆರ್‌ಝೆಡ್ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವುದು ನಿಷೇಧವಿರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಯಾವುದೇ ಮರಳು ದಿಬ್ಬ ತೆರವುಗೊಳಿಸದಂತೆ ಹಾಗೂ ಮರಳು ಸಾಗಾಣಿಕೆ ನಡೆಸದಂತೆ ಮತ್ತು ಮರಳು ತೆಗೆಯಲು ಬಳಸುತ್ತಿದ್ದ ನಾಡ ದೋಣಿಗಳನ್ನು ನದಿ ದಡದಿಂದ ದೂರವಿಡಲು ಸೂಚಿಸಲಾಗಿದೆ.

ಅಲ್ಲದೇ ಜಿಲ್ಲೆಯಲ್ಲಿ ಮರಳು ದಾಸ್ತಾನು ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಮರಳು ದಿಬ್ಬ ತೆರವುಗೊಳಿಸುವುದು/ ಮರಳು ಸಾಗಾಣಿಕೆ ಮಾಡುವುದು/ಮರಳು ದಾಸ್ತಾನು ಮಾಡುವುದು ಹಾಗೂ ಮರಳು ತೆಗೆಯಲು ಬಳಸುವ ನಾಡ ದೋಣಿಗಳು ನದಿಯಲ್ಲಿ ಕಂಡುಬಂದಲ್ಲಿ ನಾಡ ದೋಣಿ/ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿ, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News