ಆಟೋರಿಕ್ಷಾಗಳಿಗೆ ಕಲರ್ ಕೋಡಿಂಗ್

Update: 2019-06-14 16:59 GMT

ಉಡುಪಿ, ಜೂ.14: ಜಿಲ್ಲಾ ದಂಡಾಧಿಕಾರಿಗಳ ಅಧಿಸೂಚನೆಯಂತೆ ಉಡುಪಿ ಹಾಗೂ ಕುಂದಾಪುರ ತಾಲೂಕು ವ್ಯಾಪ್ತಿಯ ಆಟೋರಿಕ್ಷಾಗಳಿಗೆ ಕಲರ್ ಕೋಡಿಂಗ್ (ವಲಯವಾರು) ನೀಡಲಾಗುತ್ತಿದ್ದು, ಎಲ್ಲಾ ಆಟೋರಿಕ್ಷಾ ಮಾಲಕರು/ಚಾಲಕರು ತಮ್ಮ ವಾಹನದ ಪರ್ಮಿಟ್ ಹಾಗೂ ಮೂಲ ದಾಖಲೆಗಳನ್ನು ತಪ್ಪದೇ ತಪಾಸಣಾ ಸಂದರ್ಭದಲ್ಲಿ ಹಾಜರುಪಡಿಸುವಂತೆ ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News