ಮಟ್ಕಾ: ಮೂವರ ಬಂಧನ
Update: 2019-06-14 22:55 IST
ಉಡುಪಿ, ಜೂ.14: ಮಟ್ಕಾ ಜುಗಾರಿಗೆ ಸಂಬಂಧಿಸಿ ಜೂ.13ರಂದು ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ಶ್ರೀಕೃಷ್ಣ ಹೋಟೇಲ್ ಬಳಿ ಕುಕ್ಕಿಕಟ್ಟೆ ಇಂದಿರಾನಗರದ ಅಶೋಕ್ ಸುವರ್ಣ(48) ಮತ್ತು ಆದಿ ಉಡುಪಿ ಜಂಕ್ಷನ್ ಬಳಿ ಸೋಹೆಲ್ ಹಾಗೂ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ಪೇಟೆ ಬಳಿ ಎರ್ಲಪಾಡಿ ಶಾಂತಿಪಲ್ಕೆಯ ಮಹಮ್ಮದ್ (62) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.