ಸುರತ್ಕಲ್: ಜೆಸಿಐನಿಂದ ಉಚಿತ ಪುಸ್ತಕ ವಿತರಣೆ

Update: 2019-06-14 17:46 GMT

ಮಂಗಳೂರು, ಜೂ.14: ಜೆಸಿಐ ಸುರತ್ಕಲ್‌ನಿಂದ ಮಧ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪುಸ್ತಕ ವಿತರಣಾ ಸಮಾರಂಭ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿವಿಧ ಸಮಾಜಮುಖಿ ಕೆಲಸ ಕಾರ್ಯಗಳಿಂದ ಕಾರ್ಯೋನ್ಮುಖವಾಗಿರುವ ಜೆಸಿಐ ಸುರತ್ಕಲ್, ಮಧ್ಯ ಸರಕಾರಿ ಶಾಲೆಯನ್ನು ದತ್ತು ಸ್ವೀಕರಿಸಿ 10 ವರ್ಷಗಳಿಂದ ಉಚಿತ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ವಲಯ 15ರ ವಲಯಧ್ಯಕ್ಷ ಅಶೋಕ್ ಚುಂತಾರ್ ಮಾತನಾಡಿ, ಜೆಸಿಐ ನ ‘ಒಂದು ಘಟಕ ಒಂದು ಶಾಲೆ’ ಎಂಬ ಕಾರ್ಯಚಟುವಟಿಕೆಗೆ ಪೂರಕವಾಗಿ ಜೆಸಿಐ ಸುರತ್ಕಲ್ ವರ್ಷಂಪ್ರತಿ ಪುಸ್ತಕಗಳನ್ನು ವಿತರಿಸುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಅತಿಥಿಯಾಗಿ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ. ಇದರ ಸುರತ್ಕಲ್ ಶಾಖೆಯ ಮ್ಯಾನೇಜರ್ ಪ್ರಕಾಶ್ಚಂದ್ರ ರೈ ಮಾತನಾಡಿದರು. ಜೆಸಿಐ ಅಧ್ಯಕ್ಷ ಲೋಕೇಶ ರೈ ಕೆ. ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ವ್ಯವಸ್ಥಾಪಕ ಧನಂಜಯ್ ಕುಮಾರ್, ತಾಪಂ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಚೇಳ್ಯಾರು ಗ್ರಾಪಂ ಅಧ್ಯಕ್ಷ ಜಯಾನಂದ ಚೇಳ್ಯಾರು, ಶಾಲಾ ಮುಖ್ಯೋಪಾಧ್ಯಾಯ ಶಂಕರ್, ಶಾಲಾ ವಿದ್ಯಾನಿಧಿ ಟ್ರಸ್ಟ್‌ನ ಅಧ್ಯಕ್ಷ ಕೃಷಮೂರ್ತಿ ಭಟ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಭಗವಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೆಸಿಐ ಸುರತ್ಕಲ್‌ನ ನಿಕಟಪೂರ್ವಾಧ್ಯಕ್ಷ ಪ್ರವೀಣ್ ಶೆಟ್ಟಿ, ಪೂರ್ವಾಧ್ಯಕ್ಷ ಸೀತಾರಾಮ ರೈ, ನಿರಂಜನ್ ಬಾಳ, ಪುಷ್ಪರಾಜ್ ಶೆಟ್ಟಿ, ಜಯೇಶ್ ಗೋವಿಂದ್, ಜೆಸಿರೇಟ್ ಅಧ್ಯಕ್ಷೆ ಅನಿತಾ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಶಿಶಿರ್ ಶೆಟ್ಟಿ, ಕಾರ್ಯಕ್ರಮದ ನಿರ್ದೇಶಕ ಯೋಗೀಶ್ ದೇವಾಡಿಗ, ಸದಸ್ಯರಾದ ಜ್ಯೋತಿ ಜೆ. ಶೆಟ್ಟಿ, ದಿನೇಶ್ ದೇವಾಡಿಗ, ಜ್ಯೋತಿ ಪಿ. ಶೆಟ್ಟಿ ಲಾವಣ್ಯ, ಪ್ರಥಮ್ ಮತ್ತು ಶಾಲೆಯ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶಂಕರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News