ಭಟ್ಕಳ: ಆರ್ಥಿಕ ಸಾಕ್ಷರತಾ ಸಪ್ತಾಹ

Update: 2019-06-14 17:59 GMT

ಭಟ್ಕಳ: ಬ್ಯಾಂಕಿನೊಂದಿಗೆ ಕೈ ಜೊಡಿಸುವದರಿಂದ ಅನೇಕ ಲಾಭಗಳಿದ್ದು ಅವುಗಳನ್ನು ಅರಿತು ಮುನ್ನೆಡೆದರೆ ರೈತರಿಗೆ ಲಾಭವಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಮುರ್ಡೇಶ್ವರ ಶಾಖಾ ಪ್ರಭಾರ ವ್ಯವಸ್ಥಾಪಕ ಗೌತಮ ಕರಣ್ ಹೇಳಿದರು. 

ಅವರು ಮಾವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಮುರ್ಡೇಶ್ವರ, ಸಾಕ್ಷರತಾ ಕೇಂದ್ರ ಭಟ್ಕಳ ಇವುಗಳ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತಾ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಆರ್ಥಿಕ ಸಾಕ್ಷರತಾ ಸಪ್ತಾಹವನ್ನು ನಡೆಸುವ ಮೂಲ ಉದ್ದೇಶವನ್ನು ತಿಳಿಸಿದ ಅವರು ರೈತರು ಸಾಲ ಮರುಪಾವತಿ ಮಾಡದೇ ಇರುವುದರಿಂದ ಅನಾನುಕೂಲತೆಗಳು ಏನು ಎನ್ನುವ ಕುರಿತು ವಿವರಿಸಿದರು. 

ಆರ್ಥಿಕ ಸಮಾಲೋಚಕರಾದ ದಯಾನಂದ ಗುಂಡು ಮಾತನಾಡಿ ಭಾರತೀಯ ರಿಸರ್ವ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಸಪ್ತಾಹದ  ಧ್ಯೇಯ, ಉದ್ದೇಶ ಹಾಗೂ ರೈತರಿಗೆ ಬ್ಯಾಂಕಿನಲ್ಲಿ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು. 

ರೈತರಿಗೆ ಬೇಸಾಯದ ಅಗತ್ಯಗಳಿಗೆ ಬ್ಯಾಂಕಿನ ಧನ ಸಹಾಯ ಉಪಯೊಗಿಸುವದರಿಂದ ಹೇಗೆ ಪ್ರಯೊಜನವಾಗುವುದು, ರೈತರ ಬ್ಯಾಂಕ್ ಸಾಲವನ್ನು ಸಕಾಲದಲ್ಲಿ ಮರಳಿಸುವದರಿಂದ ಯಾವ್ಯಾವ ಪ್ರಯೋಜನಗಳೇನು. ರೈತರ ಬೆಳೆಗಳು ನಷ್ಟವಾದಾಗ ವಿಮೆಯೂ ಹೇಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ವಿವರಿಸಲಾಯಿತು. 

ಸಿಂಡಿಕೇಟ್ ಬ್ಯಾಂಕ್ ಭಟ್ಕಳದ ಉಪ ಶಾಖಾ ವ್ಯವಸ್ಥಾಪಕ ನಿತಿನ್, ಬೆಳಕೆ ಸಿಂಡಿಕೇಟ್ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕಿರಣ್ ಕೃಷ್ಣನ್, ಶಿರಾಲಿ ಸಿಂಡಿಕೇಟ್ ಬ್ಯಾಂಕ್ ಶಾಖಾ ಉಪ ವ್ಯವಸ್ಥಾಪಕ ವೆಂಕಟೇಶ,  ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮುರ್ಡೇರ್ಶವರ ಶಾಖಾ ಉಪ ವ್ಯವಸ್ಥಾಪಕ ಸುನಿಲ್,  ಆರ್ಥಿಕ ಸಂಯೋಜಕಿ ಗೀತಾ ನಾಯ್ಕ ಇವರು ಸಪ್ತಾಹ ಕಾರ್ಯಕ್ರಮಕ್ಕೆ ಸಹಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News