ವಿಶ್ವ ರತ್ನ-ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ವಜ್ರಾಭರಣಗಳ ಹಬ್ಬ

Update: 2019-06-14 18:22 GMT

ಮಂಗಳೂರು, ಜೂ.14: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಮಂಗಳೂರು ಶೋರೂಂನಲ್ಲಿ ಜೂನ್ 17ರಿಂದ 30ರವರೆಗೆ ಪೊಲ್ಕಿ ವಜ್ರಾಭರಣಗಳು, ಅಮೂಲ್ಯ ಹರಳುಗಳ ಆಭರಣಗಳು ಮತ್ತು ಅನ್‌ಕಟ್ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ-ವಿಶ್ವ ರತ್ನ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ದುಬೈ ಅಂತರ್‌ರಾಷ್ಟ್ರೀಯ ಆಭರಣ ಪ್ರದರ್ಶನ, ಇಸ್ತಾನ್‌ಬುಲ್ ಆಭರಣ ಪ್ರದರ್ಶನ ಮತ್ತು ಹಾಂಗ್‌ಕಾಂಗ್ ಆಭರಣ ಮತ್ತು ಹರಳು ಪ್ರದರ್ಶನ ಮುಂತಾದ ಅಂತರ್‌ರಾಷ್ಟ್ರೀಯ ಪ್ರದರ್ಶನಗಳಲ್ಲಿ ಪ್ರದರ್ಶಿಸಲಾಗಿದ್ದ ವಜ್ರಾಭರಣಗಳು ಮತ್ತು ಅಮೂಲ್ಯ ಹರಳುಗಳ ಆಭರಣಗಳನ್ನು ಪ್ರದರ್ಶಿಸಲಾಗುವುದು.

ಈ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆಯನ್ನು ಜೂನ್ 17ರಂದು ಸಂಜೆ 4.30ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ. ಎಂ. ಮೋಹನ್ ಆಳ್ವಾ ನೆರವೇರಿಸಲಿದ್ದಾರೆ.

ಬಿ.ಎ ಸಮೂಹ, ತುಂಬೆ, ಎಂ.ಡಿ, ಬಿ. ಅಬ್ದುಲ್ ಸಲಾಮ್, ಮಿಸ್ಬಾಹ್ ಮಹಿಳಾ ಕಾಲೇಜು ಮುಖ್ಯಸ್ಥೆ ಮುಮ್ತಾಝ್ ಅಲಿ, ಹಜಜ್ ಗ್ರೂಪ್‌ನ ಹನೀಪ್ ಹಾಜಿ, ಸಿಂಗಾರಿ ಬೀಡಿ ಸಮೂಹದ ಸುಲೈಮಾಣ್ ಹಾಜಿ ನರ್ಶ, ಮುಕ್ಕ ಸೀ ಫುಡ್‌ನ ಆರಿಫ್, ಹಸನ್ ಹಾಜೀ ಆ್ಯಂಡ್ ಕೊ. ಇದರ ಜೊತೆಗಾರ ಅಮೀನ್ ಎಚ್.ಎಚ್, ಎಚ್‌ಎನ್‌ಜಿಸಿ ಬಿಲ್ಡರ್ಸ್ ಆ್ಯಡ್ ಡೆವಲಪರ್ಸ್‌ನ ಅಹ್ಮದ್ ಮನ್ಸೂರ್, ಐಎನ್‌ಟಿಇಸಿ ರಾಜ್ಯ ಕಾರ್ಯದರ್ಶಿ ಕೆ.ಎಸ್ ಅಮೀರ್ ಅಹ್ಮದ್ ತುಂಬೆ, ತಾಹಿರ್ ಹುಸೇನ್ ಪತ್ನಿ ಪರ್ವೀನ್ ತಾಹಿರ್, ಹಸೀನಾ ನೌಫಾಲ್ ಯೆನೆಪೊಯ, ಡಾ. ಕವಿತಾ ಡಿಸೋಜಾ, ಲಯನ್ಸ್ ಕ್ಲಬ್, ಮಾಜಿ ಜಿಲ್ಲಾ ಸಮನ್ವಯಕಿ ಅರುಣಾ ಎಸ್. ಶೆಟ್ಟಿ, ಶಹನಾಝ್ ಬೇಗಂ, ರೊಹರಾ ಎಚ್.ಕೆ ಖಾದರ್, ಕರ್ನಾಟಕ ಸ್ಟೀಲ್ ಆ್ಯಂಡ್ ಸಿಮೆಂಟ್‌ನ ಸಫಿಯಾ ಮುಹಮ್ಮದ್ ಹಾಗೂ ಲಿಯಾ ಕನ್‌ಸ್ಟ್ರಕ್ಷನ್‌ನ ಹಫೀಝಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಸುಲ್ತಾನ್‌ ಗ್ರೂಪ್‌ನ ಎಂಡಿ ಡಾ.ಟಿ.ಎಂ ಅಬ್ದುಲ್ ರವೂಫ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News