ಬಿಹಾರ: ಮತ್ತೆ ನಾಲ್ಕು ಮಕ್ಕಳು ಮೃತ್ಯು

Update: 2019-06-15 18:10 GMT

ಪಾಟ್ನ, ಜೂ.15: ಬಿಹಾರದ ಮುಝಫ್ಪರ್‌ಪುರ ಜಿಲ್ಲೆಯಲ್ಲಿ ಹೈಪೊಗ್ಲೈಸೀಮಿಯಾ (ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು)ದಿಂದ ಮತ್ತೆ ನಾಲ್ಕು ಮಕ್ಕಳು ಸಾವನ್ನಪ್ಪಿದ್ದು ಇದರೊಂದಿಗೆ ಮೃತಪಟ್ಟ ಮಕ್ಕಳ ಒಟ್ಟು ಸಂಖ್ಯೆ 67ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಬಹುತೇಕ 10ರ ಕೆಳಹರೆಯದ ಮಕ್ಕಳಾಗಿವೆ. ಸರಕಾರಿ ಅಧೀನದ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಟ್ರಸ್ಟ್‌ನಿಂದ ನಡೆಸಲ್ಪಡುವ ಆಸ್ಪತ್ರೆಯಲ್ಲಿ ಈ ತಿಂಗಳಲ್ಲಿ ಒಟ್ಟು 67 ಮಕ್ಕಳು ಸಾವನ್ನಪ್ಪಿದ್ದಾರೆ. ಜೂನ್ 1ರಿಂದ ಶ್ರೀಕೃಷ್ಣ ಆಸ್ಪತ್ರೆಗೆ 197 ಮಕ್ಕಳು ಹಾಗೂ ಕೇಜ್ರೀವಾಲ್ ಆಸ್ಪತ್ರೆಗೆ 91 ಮಕ್ಕಳನ್ನು ಮೆದುಳು ಜ್ವರದ ಶಂಕೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇವರಲ್ಲಿ ಹೆಚ್ಚಿನ ಮಕ್ಕಳು ಹೈಪೊಗ್ಲೈಸೀಮಿಯಾ ಬಾಧಿತರಾಗಿರುವುದು ಪತ್ತೆಯಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಲ್ಲಿ ಆರು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News