ಸಮಾನತೆಯ ಆಧಾರದಲ್ಲಿ ಮಾತುಕತೆ: ಪಾಕ್ ವಿದೇಶ ಸಚಿವ

Update: 2019-06-15 18:20 GMT

ಬಿಶ್ಕೆಕ್ (ಕಿರ್ಗಿಸ್ತಾನ್), ಜೂ. 15: ‘ಸಮಾನತೆಯ ಆಧಾರದಲ್ಲಿ’ ಮತ್ತು ‘ಗೌರವಯುತ ವಿಧಾನದಲ್ಲಿ’ ಭಾರತದೊಂದಿಗೆ ಮಾತುಕತೆಗಳನ್ನು ನಡೆಸಲು ಪಾಕಿಸ್ತಾನ ಬಯಸುತ್ತದೆ ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಹೇಳಿದ್ದಾರೆ.

ಎಲ್ಲ ಮಹತ್ವದ ವಿವಾದಗಳನ್ನು ಬಗೆಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕೇ ಎನ್ನುವುದು ಭಾರತಕ್ಕೆ ಬಿಟ್ಟ ವಿಷಯ ಎಂದು ಕಿರ್ಗಿಸ್ತಾನ್ ರಾಜಧಾನಿ ಬಿಶ್ಕೆಕ್‌ನಲ್ಲಿ ನಡೆದ 19ನೇ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿರುವ ಅವರು ಪಾಕಿಸ್ತಾನದ ಸುದ್ದಿ ವಾಹಿನಿ ‘ಜಿಯೋ ನ್ಯೂಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.

ಶುಕ್ರವಾರ ಸಮ್ಮೇಳನದ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಅಭಿನಂದಿಸಿರುವುದನ್ನು ಅವರು ಈ ಸಂದರ್ಭದಲ್ಲಿ ಖಚಿತಪಡಿನಸಿದರು.

ಭಾರತ ‘ಚುನಾವಣಾ ಮನೋಸ್ಥಿತಿ’ಯಲ್ಲಿದೆ ಎಂದು ಕುರೇಶಿ ಆರೋಪಿಸಿದರು.

‘‘ಏನು ಹೇಳಬೇಕಾಗಿದೆಯೋ ಅದನ್ನು ಪಾಕಿಸ್ತಾನ ಹೇಳಿದೆ’’ ಎಂದರು.

‘‘ಇನ್ನು ಭಾರತ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗಿದೆ. ನಮಗೇನೂ ಅವಸರವೂ ಇಲ್ಲ, ಸಮಸ್ಯೆಯೂ ಇಲ್ಲ. ಭಾರತ ಸಿದ್ಧಗೊಂಡಾಗ, ನಾವು ಸಿದ್ಧರಾಗಿಯೇ ಇರುತ್ತೇವೆ. ಆದರೆ, ನಾವು ಸಮಾನತೆ ಮತ್ತು ಘನತೆಯ ಆಧಾರದಲ್ಲಿ ಮಾತುಕತೆಗಳನ್ನು ನಡೆಸುತ್ತೇವೆ’’ ಎಂದು ಕುರೇಶಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News