​ಬ್ರಹ್ಮಕುಮಾರಿ ವಿವಿಯಲ್ಲಿ ಸಾಹಿತ್ಯ ಸಂವಾದ ಕಾರ್ಯಕ್ರವು

Update: 2019-06-16 10:29 GMT

ಮಂಗಳೂರು, ಜೂ.16: ನಗರದ ಉರ್ವಸ್ಟೋರ್‌ನಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ರವಿವಾರ ವಿದ್ಯಾರ್ಥಿಗಳಿಗಾಗಿ ‘ಅಧ್ಯಯನದಿಂದ ಆಂತರಿಕ ಸಶಕ್ತೀಕರಣ’ ಮಾಹಿತಿ ಕಾರ್ಯಕ್ರಮ ಜರುಗುತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಭೌತಿಕ ವಿದ್ಯಾಭ್ಯಾಸ ಯಾರಿಗೂ ಪರಿಪೂರ್ಣತ್ವ ತಂದುಕೊಡುವುದಿಲ್ಲ. ಕೆಲವೊಮ್ಮೆ ಜಡತ್ವದೆಡೆಗೆ ಕರೆದುಕೊಂಡು ಹೋಗುವ ಸಾಧ್ಯತೆಯೂ ಇದೆ. ಹಾಗಾಗಿ ಜೀವನದ ಅನುಭವದೊಂದಿಗೆ ಅಧ್ಯಯನ ಮಾಡಬೇಕು. ವಿಕೃತಿಯಿಂದ ದೂರವಿರಲು ಸಕಾರಾತ್ಮಕ ಚಿಂತನೆ ಬೆಳೆಸಬೇಕು ಎಂದರು.

ಮಂಗಳೂರು ಬ್ರಹ್ಮ ಕುಮಾರೀಸ್ ಸಂಚಾಲಕಿ ಬ್ರಹ್ಮಕುಮಾರಿ ವಿಶ್ವೇಶ್ವರಿ, ಇಂದು ಬೌದ್ಧಿಕ ಜ್ಞಾನದ ಅಧ್ಯಯನದಿಂದ ಡಿಗ್ರಿ ಸಿಗುತ್ತದೆ. ಆದರೆ ಅದರಿಂದ ಆಂತರಿಕ ಸಶಕ್ತಿ ಪಡೆಯಲು ಸಾಧ್ಯವಿಲ್ಲ. ಮಕ್ಕಳಲ್ಲಿ ಒಂದು ಸಣ್ಣ ಸೋಲನ್ನೂ ಎದುರಿಸುವ, ಒಪ್ಪಿಕೊಳ್ಳುವ ಶಕ್ತಿ ಇಲ್ಲ. ಆಧ್ಯಾತ್ಮಿಕತೆಯ ಅಧ್ಯಯನದಿಂದ ಮಾತ್ರ ಆಂತರಿಕವಾಗಿ ಸಶಕ್ತರಾಗಲು ಸಾಧ್ಯ. ಟಿ.ವಿ.,ಮೊಬೈಲ್‌ಗಳು ಮಾನಸಿಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಸಕಾರಾತ್ಮಕ ಚಿಂತನೆಯಿಂದ ಮನಸ್ಸು ಸಶಕ್ತಗೊಳ್ಳುತ್ತದೆ ಎಂದರು.

ಮಂಗಳೂರು ಸಂಸ್ಕೃತ ಭಾರತಿ ಅಧ್ಯಕ್ಷ ಎಂ.ಆರ್.ವಾಸುದೇವ, ತುಳು ಸಾಹಿತ್ಯ ಅಕಾಡಮಿಯ ಸದಸ್ಯ ಬೆನೆಟ್ ಅಮ್ಮನ್ನ, ಹಿಂದಿ ಪ್ರಚಾರ ಸಮಿತಿಯ ಚಿದಾನಂದ ದೇವಾಡಿಗ ಉಪಸ್ಥಿತರಿದ್ದರು.

ಬಿಜೈ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಮಾಲೋಚಕಿ ಬಿ.ವಿ.ರೇವತಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News