ಮಲ್ಪೆ: ಪ್ರವಾಸಿಗ ಮೇಲೆ ಲಾಠಿ ಬೀಸಿದ ಪ್ರವಾಸಿ ಮಿತ್ರ

Update: 2019-06-16 16:32 GMT

ಮಲ್ಪೆ, ಜೂ.16: ಸಮುದ್ರಕ್ಕಿಳಿಯದಂತೆ ಅಳವಡಿಸಲಾದ ಎಚ್ಚರಿಕೆಯ ಸೂಚನೆಯನ್ನೂ ಕಡೆಗಣಿಸಿ ಮಲ್ಪೆ ಕಡಲ ಕಿನಾರೆಯಲ್ಲಿ ಸಮುದ್ರಕ್ಕಿಳಿದು ಮೋಜು, ಮಸ್ತಿಯಲ್ಲಿ ತೊಡಗಿದ್ದ ಪ್ರವಾಸಿಗರಿಗೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ ಪ್ರವಾಸಿಗರಿಗೆ ಹೊಡೆದಿರುವುದು ಪೊಲೀಸರಲ್ಲ. ಪ್ರವಾಸಿ ಮಿತ್ರ ಯೋಜನೆಯಡಿ ನಿಯುಕ್ತಿಗೊಂಡಿರುವ ಹೋಮ್‌ಗಾರ್ಡ್ ಸಿಬ್ಬಂದಿ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಆದರೆ ಪ್ರವಾಸಿಗರಿಗೆ ಹೊಡೆದಿರುವುದು ಪೊಲೀಸರಲ್ಲ. ಪ್ರವಾಸಿ ಮಿತ್ರ ಯೋಜನೆಯಡಿ ನಿಯುಕ್ತಿಗೊಂಡಿರುವ ಹೋಮ್‌ಗಾರ್ಡ್ ಸಿಬ್ಬಂದಿ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ‘ವಾಯು’ ಚಂಡಮಾರುತದ ಪ್ರಭಾವ ಹಾಗೂ ಮುಂಗಾರು ಈಗಾಗಲೇ ಜಿಲ್ಲೆಗೆ ಕಾಲಿಟ್ಟರುವ ಹಿನ್ನಲೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಬೀಚ್‌ಗೆ ಇಳಿಯದಂತೆ 1 ಕಿ.ಮೀ. ದೂರಕ್ಕೆ 7 ಅಡಿ ಎತ್ತರದಲ್ಲಿ ಉದ್ದಕ್ಕೂ ನೆಟ್ ಅಳವಡಿಸಲಾಗಿದೆ. ಆದರೆ ಕಳೆದೆರಡು ದಿನಗಳಿಂದ ಮಳೆ ಇಲ್ಲದೇ ಚೆನ್ನಾಗಿ ಬಿಸಿಲಾಗುತ್ತಿರುವುದರಿಂದ ಹೊರ ಜಿಲ್ಲೆಯಿಂದ ಮಲ್ಪೆಗೆ ಬಂದಿದ್ದ ಪ್ರವಾಸಿಗರು ಎಲ್ಲಾ ಎಚ್ಚರಿಕೆಯನ್ನು ಮೀರಿ ಸಮುದ್ರಕ್ಕಿಳಿದು ನೀರಿನಲ್ಲಿ ಆಟವಾಡುತಿದ್ದಾರೆ.

ಕಡಲು ಪ್ರಕ್ಷುಬ್ಧವಾಗಿದ್ದು ನೀರಿಗೆ ಇಳಿಯದಂತೆ, ಮೇಲೆ ಬರುವಂತೆ ಪದೇ ಪದೇ ಎಚ್ಚರಿಸಿದ್ದರೂ ಪ್ರವಾಸಿಗರು ಮಾತ್ರ ನೀರಿನಿಂದ ಮೇಲೆ ಬಂದಿರಲಿಲ್ಲ. ಈವೇಳೆ ಪ್ರವಾಸಿ ಮಿತ್ರ ಸಿಬ್ಬಂದಿ ಲಾಠಿ ಬೀಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಡಲು ಪ್ರಕ್ಷುಬ್ಧವಾಗಿದ್ದು ನೀರಿಗೆ ಇಳಿಯದಂತೆ, ಮೇಲೆ ಬರುವಂತೆ ಪದೇ ಪದೇ ಎಚ್ಚರಿಸಿದ್ದರೂ ಪ್ರವಾಸಿಗರು ಮಾತ್ರ ನೀರಿನಿಂದ ಮೇಲೆ ಬಂದಿರಲಿಲ್ಲ. ಈವೇಳೆ ಪ್ರವಾಸಿ ಮಿತ್ರ ಸಿಬ್ಬಂದಿ ಲಾಠಿ ಬೀಸಿದ್ದಾರೆ ಎಂದು ಆರೋಪಿಸಲಾಗಿದೆ. ಲಾಠಿ ಬೀಸುತ್ತಿರುವ ದೃಶ್ಯಾವಳಿಯನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿದ್ದಾರೆ. ಸದ್ಯ ಈ ಸುದ್ದಿ ಪೊಲೀಸರೇ ಲಾಠಿ ಏಟು ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಲಾಠಿ ಬೀಸುತ್ತಿರುವ ದೃಶ್ಯಾವಳಿಯನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಿಗೆ ಹರಿಯ ಬಿಟ್ಟಿದ್ದಾರೆ. ಸದ್ಯ ಈ ಸುದ್ದಿ ಪೊಲೀಸರೇ ಲಾಠಿ ಏಟು ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೂನ್‌ನಲ್ಲಿ 3 ಸಾವು:   ಕಳೆದ ವರ್ಷ ಜೂನ್ ತಿಂಗಳಲ್ಲಿ ಮಲ್ಪೆ ಕಡಲ ಕಿನಾರೆಗೆ ಬಂದಿದ್ದ ಪ್ರವಾಸಿಗರಲ್ಲಿ ಮೂವರು ಮಂದಿ ಅಲೆಗಳ ರಭಸಕ್ಕೆ ಸಿಲುಕಿ ಮೃತಪಟ್ಟಿದ್ದರು. ನೀರಿಗಿಳಿಯದಂತೆ ಎಚ್ಚರಿಕೆ ಕೊಡುತಿದ್ದರೂ, ಪದೇ ಪದೇ ಪ್ರವಾಸಿಗರು ನೀರಿಗಿಳಿದು ಆಟವಾಡುತ್ತಾರೆ. ಸಮವಸ ಧರಿಸಿರುವ ಸಿಬ್ಬಂದಿ ವೌನವಾದರೆ ಅವಘಡ ಸಂಭವಿಸಿದ ಬಳಿಕ ನಮ್ಮನ್ನೇ ದೂರಲಾಗುತ್ತದೆ. ಹೆಚ್ಚಿನ ಪ್ರವಾಸಿಗರು ಮದ್ಯ ಸೇವಿಸಿ ನೀರಿಗಿಳಿಯುತ್ತಿರುವ ಪರಿಣಾಮ ಹೆಚ್ಚಿನ ಅವಘಡ ಸಂಭವಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿ ಮಿತ್ರ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಪ್ರವಾಸಿಗರಿಗೆ ಹೊಡೆದಿರುವ ಬಗ್ಗೆ ಎಲ್ಲಿಯೂ ಸ್ಪಷ್ಟತೆ ಇಲ್ಲ. ಪ್ರವಾಸಿಗರ ರಕ್ಷಣೆ ಮುಖ್ಯ ಉದ್ದೇಶವಾಗಿದ್ದು, ಪ್ರವಾಸಿಗರು ಇದನ್ನು ಅರ್ಥಮಾಡಿಕೊಳ್ಳಬೇಕು. ನೆಟ್ ಅಳವಡಿಸಿದ್ದರೂ ಅದನ್ನು ಮೀರಿ ನೀರಿಗಿಳಿದಿ ರುವುದು ಸರಿಯಲ್ಲ.

-ನಿಶಾ ಜೇಮ್ಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಡುಪಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News