ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವತಿಯಿಂದ ಪ್ರಾಯೋಗಿಕ ಹಜ್ಜ್ ತರಗತಿ

Update: 2019-06-17 12:29 GMT

ಬಂಟ್ವಾಳ: ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವತಿಯಿಂದ ಪ್ರಾಯೋಗಿಕ ಹಜ್ಜ್ ತರಬೇತಿ ಶಿಬಿರವು ಪಾಣೆಮಂಗಳೂರಿನ ಸಾಗರ್ ಆಡಿಟೊರಿಯಂ ನಲ್ಲಿ  ಶನಿವಾರ ನಡೆಯಿತು.

ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಅಧ್ಯಕ್ಷ ಸೆರ್ಕಳ ಇಬ್ರಾಹೀಂ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಚಿ ಇಬ್ರಾಹಿಂ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಇಸ್ಮಾಯಿಲ್ ಉಜಿರೆ ತಂಙಳ್ ದುಆ ನೆರವೇರಿಸಿದರು.

ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮತ್ತು ಜಿ.ಎಂ. ಕಾಮಿಲ್ ಸಖಾಫಿ ತರಬೇತಿ ನೀಡಿದರು.

ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಇಸ್ಮಾಯಿಲ್ ಮಾಸ್ಟರ್, ಅಡ್ವೊಕೇಟ್ ಶಾಕಿರ್ ಹಾಜಿ, ಮುಸ್ತಫ ನಹೀಮಿ, ಮುಸ್ತಫ ಮಾಸ್ಟರ್, ಅಬ್ದುಲ್ ಹಮೀದ್ ಮಳೆಬೆಟ್ಟು, ಜಿಲ್ಲಾ ನಾಯಕರಾದ ಶರೀಫ್ ನಂದಾವರ, ರಶೀದ್ ಹಾಜಿ ವಗ್ಗಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಇಬ್ರಾಹಿಂ ಅಹ್ಸನಿ ಮಂಜನಾಡಿ ಸ್ವಾಗತಿಸಿ, ಸಲೀಂ ಹಾಜಿ ಬೈರಿಕಟ್ಟೆ ವಂದಿಸಿದರು. ಶಿಬಿರದಲ್ಲಿ 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News