'ಕಾರ್ಮಿಕ ಸೌಲಭ್ಯ ಪಡೆಯಲು ಸಂಘಟಿತರಾಗಬೇಕು'

Update: 2019-06-16 12:53 GMT

ಪಡುಬಿದ್ರಿ: ಉದ್ಯೋಗ ಭದ್ರತೆ, ಕೂಲಿ, ಸೌಲಭ್ಯಗಳಂತಹ ಸಹಜ ಬೇಡಿಕೆಗಳನ್ನು ಪಡೆಯಲು ಸಂಘಟಿತರಾಗಿ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಪ್ರತಾಪ ಸಿಂಹ ಬೆಂಗಳೂರು ಕರೆ ನೀಡಿದ್ದಾರೆ.

ಪಡುಬಿದ್ರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಿಐಟಿಯು ಯುಪಿಸಿಎಲ್ ಎಂಪ್ಲಾಯಿಸ್ ಯೂನಿಯನ್ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಲ್ಲಿ ಕಾನೂನಿನ ಅರಿವು, ಪ್ರಜ್ಞೆ ಇನ್ನೂ ಮೂಡಿಲ್ಲ, ಪ್ರಾಥಮಿಕ ಶಾಲಾ ಹಂತದಲ್ಲೇ ಹಕ್ಕು ಕರ್ತವ್ಯಗಳ ಬಗ್ಗೆ ತಿಳಿಯಬೇಕು. ಸಂವಿಧಾನ ಬದ್ಧವಾಗಿ ಕಾರ್ಮಿಕರಿಗಿರುವ ಕಾನೂನಿಂದ ಹಕ್ಕುಗಳನ್ನು ಪಡೆಯಲು ಸಂಘಟಿತರಾಗಬೇಕು ಎಂದರು.

ಸಂಘಟನೆಯಲ್ಲಿ ಒಡಕು ಮೂಡಿಸುವ ಆಮಿಷಕ್ಕೆ ಬಲಿಯಾಗದಿರಿ. ಕಾರ್ಮಿಕರಿಗೆ ಕನಿಷ್ಠ ವೇತನ ರೂ. 14,500 ನೀಡಬೇಕಿದ್ದರೂ, ಬಂಡವಾಳ ಶಾಹಿಗಳೆಲ್ಲ ಅದನ್ನು 7,500 ರೂ.ಗಿಂತ ಹೆಚ್ಚಾಗದಂತೆ ತಡೆಯುತ್ತಿದ್ದಾರೆ ನುಡಿದರು.

ಯುಪಿಸಿಎಲ್ ಎಂಪಾಯಿಸ್ ಯೂನಿಯನ್ ಅಧ್ಯಕ್ಷ ಲೋಕಯ್ಯ ಮಾತನಾಡಿ, ಯುಪಿಸಿಎಲ್ ವಿರೋಧವಾಗಿ ಸಂಘಟನೆ ಕಟ್ಟಿಲ್ಲ, ಖಾಯಂ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಅನ್ಯಾಯ, ಸವಲತ್ತು ಲಭಿಸುವಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಊರಿನವರನ್ನು ಸೇರಿಸಿಕೊಂಡು ಹೋರಾಟ ನಡೆಸಲಾಗುತ್ತದೆ. ಸಂಘಟನೆಯಲ್ಲಿನ ಗೊಂದಲ ದೂರವಿರಿಸಿ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು. 

ದಸಂಸ ಮೈಸೂರು ವಿಭಾಗದ ಶೇಖರ ಹೆಜಮಾಡಿ ಮುಖ್ಯ ಭಾಷಣ ಮಾಡಿದರು. ಯುಪಿಸಿಎಲ್ ಎಂಪ್ಲಾಯಿಸ್ ಯೂನಿಯನ್ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ, ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯರಾದ ಹಸನ್ ಬಾವ, ಕರುಣಾಕರ ಸಾಲ್ಯಾನ್, ದಿನೇಶ್ ಕೋಟ್ಯಾನ್, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ ಅಡ್ವೆ, ಮಾಜಿ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಉದ್ಯಮಿ ಮಿಥುನ್ ಆರ್ ಹೆಗ್ಡೆ, ಹಿಂದೂ ಜಾಗರಣ ವೇದಿಕೆ ಎಲ್ಲೂರು ಘಟಕ ಅಧ್ಯಕ್ಷ ಕಿರಣ್ ರಾವ್, ಹಿಂದೂ ಮುಖಂಡಡ ಮಹೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಕಾಪು ತಾಲ್ಲೂಕು ಅಧ್ಯಕ್ಷ ನಿಝಾಮುದ್ದೀನ್, ಯುವ ಸೇನೆ ಜಿಲ್ಲಾಧ್ಯಕ್ಷ ಅಬ್ದುಲ್ ರಹಿಮಾನ್, ಬಸ್ ಏಜೆಂಟ್ ಬಳಗದ ಅರವಿಂದ ಪಡುಬಿದ್ರಿ, ಲಕ್ಷ್ಮಣ್ ಉಪಸ್ಥಿತರಿದ್ದರು.

ವೀನೇಶ್ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News