ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಶಾಲಾ ಸಂಸತ್ ಉದ್ಘಾಟನೆ

Update: 2019-06-16 12:55 GMT

ಮಂಗಳೂರು, ಜೂ.16: ನಗರದ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಶಾಲಾ ಸಂಸತ್‌ನ್ನು ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ.ಧರ್ಮಗುರು ಫ್ರಾನ್ಸಿಸ್ ಆಸ್ಸಿಸಿ ಡಿ ಆಲ್ಮೇಡಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ ವಂ.ಧರ್ಮಗುರು ಫ್ರಾನ್ಸಿಸ್ ಆಸ್ಸಿಸಿ ಡಿ ಆಲ್ಮೇಡಾ, ಯಾವ ರಾಷ್ಟ್ರವೂ ತನ್ನ ಯುವ ಜನಾಂಗವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ನಾಯಕರನ್ನು ರೂಪಿಸುವುದೋ ಆ ದೇಶವು ವಿಶ್ವ ನಾಯಕನಾಗಲು ಸಾಧ್ಯ. ಅಂತಹ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸುವುದು. ಪ್ರತಿಯೊಂದು ವಿದ್ಯಾಸಂಸ್ಥೆಯ ಕರ್ತವ್ಯ ಎಂದು ತಿಳಿಸಿದರು.

ಶಾಲಾ ವ್ಯವಸ್ಥಾಪಕ ವಂ.ಧರ್ಮಗುರು ವಿಲ್ಸನ್ ಎಲ್. ವೈಟಸ್ ಡಿಸೋಜ ಹೊಸದಾಗಿ ಚುನಾಯಿತರಾದ ಶಾಲಾ ಮಂತ್ರಿಮಂಡಲಕ್ಕೆ ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲ ವಂ.ಧರ್ಮಗುರು ರಾಬರ್ಟ್ ಡಿಸೋಜ, ಹೊಸದಾಗಿ ಚುನಾಯಿತರಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿ ನಾಯಕನಾಗಿ ಡ್ಯಾನಿಶ್ ಪಿಂಟೊ, ವಿದ್ಯಾರ್ಥಿನಿ ನಾಯಕಿಯಾಗಿ ಪಾರ್ವತಿ ಮೆನನ್, ವಿದ್ಯಾರ್ಥಿ ಉಪನಾಯಕನಾಗಿ ರಿಯೊನ್ ಜೆಡನ್ ವಾಲ್ಡರ್ ಹಾಗೂ ವಿದ್ಯಾರ್ಥಿನಿ ಉಪನಾಯಕಿಯಾಗಿ ಹೇಬಾ ಬಾಷಿರ್ ಇಬ್ರಾಹೀಂ ಆಯ್ಕೆಯಾದರು.

ಶಿಕ್ಷಕಿ ಅನಿತಾ ಥೋಮಸ್, ಬಿಂದಿಯಾ ಮತ್ತು ಹೆನ್ರಿ ಮಸ್ಕರೇನ್ಹಸ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಶಲೋಮ್ ಫೆರ್ನಾಂಡಿಸ್ ಮತ್ತು ಲೂಕ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಗೌರಿ ರವಿ, ಐವನ ಮಸ್ಕರೇನಸ್ ಸಹಕರಿಸಿದರು. ವಿದ್ಯಾರ್ಥಿ ನಾಯಕ ಡ್ಯಾನಿಶ್ ಪಿಂಟೋ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News