ಕುಲಪತಿಯನ್ನು ಅಭಿನಂದಿಸಿದ ತುಳು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು

Update: 2019-06-16 13:06 GMT

ಮಂಗಳೂರು, ಜೂ.16: ಮಂಗಳೂರು ವಿಶ್ವವಿದ್ಯಾನಿಲಯ ದೇಶದಲ್ಲಿಯೇ ಮೊತ್ತ ಮೊದಲು ಜಾರಿಗೆಗೊಳಿಸಿದ ಎಂ.ಎ. ತುಳು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ತಮ್ಮ ಪ್ರಥಮ ವರ್ಷದ ವಾರ್ಷಿಕ ಪರೀಕ್ಷೆ ಮುಗಿಸಿದ ಬಳಿಕ, ವಿಶ್ವವಿದ್ಯಾನಿಲಯದ ನೂತನ ಕುಲಪತಿ ಪ್ರೊ.ಪಿ.ಎಸ್. ಎಡಪಡಿತ್ತಾಯ ಅವರನ್ನು ಭೇಟಿಯಾಗಿ ಶುಭಾಶಯ ಸಲ್ಲಿಸಿ, ಅಭಿನಂದಿಸಿದರು.

ಶಾಲಾ ಕಾಲೇಜುಗಳಲ್ಲಿ ತುಳು ಭಾಷೆ ಪಠ್ಯದ ವಸ್ತುವಾಗಿ ಬೆಳಕಿಗೆ ಬರುತ್ತಿದ್ದು, ತುಳು ಭಾಷೆ ಒಂದು ಚಳವಳಿಯ ರೂಪ ತಾಳುತ್ತಿದ್ದು, ತುಳುನಾಡಿನವರೇ ಆದ ನೂತನ ಕುಲಪತಿ ಅವರ ಆಗಮನದಿಂದ ಉದ್ದೇಶಿತ ತುಳು ಭಾಷಾಭಿವೃದ್ಧಿ ಯೋಜನೆಗಳು ಯಶಸ್ಸು ಪಡೆಯುವ ಬಗ್ಗೆ ವಿದ್ಯಾರ್ಥಿ ಬಳಗ ಆಶಾವಾದ ವ್ಯಕ್ತಪಡಿಸಿತು.

ತುಳು ವಿಭಾಗದ ಶೈಕ್ಷಣಿಕ ಸಂಘಟನೆ ಪೂರಕ ಗ್ರಂಥಗಳು, ಅಧ್ಯಾಪನ ಮುಂತಾದ ವಿಷಯಗಳ ನಿರ್ವಹಣೆ ಬಗ್ಗೆ ಮನವಿ ನೀಡಲಾಯಿತು. ತುಳು ಭಾಷಾಭಿವೃದ್ಧಿಯ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡುವುದಾಗಿ ಕುಲಪತಿ ಪ್ರೊ.ಎಡಪಡಿತ್ತಾಯ ಭರವಸೆ ನೀಡಿದರು.

ಸ್ನಾತಕೋತ್ತರ ವಿದ್ಯಾರ್ಥಿಗಳಾದ ಸುಭಾಶ್ಚಂದ್ರ ಕಣ್ವತೀರ್ಥ, ಶಿವಾನಂದ ಕರ್ಕೇರ, ನಾಗರಾಜ ಪಣಕ್ಕಜೆ, ಹರೀಶ್ ಎ., ದಿನೇಶ್ ಎಂ., ಜಯಲಕ್ಷ್ಮೀ ಶೆಟ್ಟಿ, ಪ್ರಶಾಂತಿ ಶೆಟ್ಟಿ, ವೇದಸ್ಮಿತಾ, ಗೀತಾ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News