ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಕೊಡುಗೆ

Update: 2019-06-16 14:23 GMT

ಉಡುಪಿ, ಜೂ.16: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ವಾರ್ಷಿಕೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಜೂ.15ರಿಂದ 25ರವರೆಗೆ ಚಿನ್ನ ಮತ್ತು ವಜ್ರದ ಆಭರಣಗಳಿಗೆ ವಿಶೇಷ ಕೊಡುಗೆಯನ್ನು ನೀಡಲಾಗುತ್ತಿದೆ.

ಪ್ರತೀ ಗ್ರಾಮ್ ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್‌ನಲ್ಲಿ ರೂ.125ರಷ್ಟು ಹಾಗೂ ವಜ್ರದ ಮೌಲ್ಯದ ಮೇಲೆ ಶೇ.10ರಷ್ಟು ಕಡಿತವಿದೆ. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಬ್‌ಬ್ರಾಂಡ್‌ಗಳಾದ ಮೈನ್ ವಜ್ರಾಭರಣ ಗಳು,ಆನ್‌ಕಟ್ ವಜ್ರಾಭರಣಗಳು, ಡಿವೈನ್ ಭಾರತೀಯ ಪಾರಂಪರಿಕ ಆಭರಣಗಳು, ಎಥಿನಿಕ್ ಕರಕುಶಲ ವಿನ್ಯಾಸಿತ ಆಭರಣಗಳು, ಅಮೂಲ್ಯ ರತ್ನಾಭರಣಗಳು, ಸ್ಟಾರ್ಲೆಟ್ ಮಕ್ಕಳ ಆಭರಣಗಳು ಮತ್ತು ಹಾಯ್ ಕ್ಯಾಷುವಲ್ ಆಭರಣಗಳೊಂದಿಗೆ ಹೊಸದಾಗಿ ಅಳಿಯಮ್ ಇವೆಲ್ಲದರ ಆಯ್ದ ಸಂಗ್ರಹಗಳು ಇಲ್ಲಿವೆ.

22 ಕ್ಯಾರೆಟ್ ಹಳೆಯ ಚಿನ್ನದ ಮೇಲೆ ಶೇ.100 ವಿನಿಮಯ ಮೌಲ್ಯಗಳು. ದೇಶದ ಅತ್ಯಂತ ನಂಬಿಕೆಯ ಆಭರಣದ ಬ್ರಾಂಡ್‌ಗಳಲ್ಲೊಂದಾದ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ 10 ರಾಷ್ಟ್ರಗಳಲ್ಲಿ 250ಕ್ಕೂ ಅಧಿಕ ಶೋ ರೂಮ್ ಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News