ಅದಮಾರು ಮಠದಿಂದ ಗಿಡಗಳನ್ನು ನೆಡುವ ಕಾರ್ಯಕ್ರಮ
Update: 2019-06-16 19:54 IST
ಉಡುಪಿ, ಜೂ.16: ಸಕಾಲಿಕ ಮಳೆಗಾಗಿ ಹಸಿರನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ, ಪರಿಸರದ ಮೇಲಿನ ಕಾಳಜಿಯಿಂದ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀ ಆರಂಭಿಸಿದ ಮರಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀ ಅದಮಾರು ಮಠದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಶ್ರೀ, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀ, ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀ ಉಸ್ಥಿತರಿದ್ದು ಸಸಿಗಳನ್ನು ನೆಟ್ಟರು.
ಪಲಿಮಾರು ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು, ಅದಮಾರು ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯರು, ಆನಂದ ಸಮಿತಿಯ ಗೋವಿಂದರಾಜ್, ಚೇತನ್ ಐತಾಳ್, ರೋಹಿತ್ ತಂತ್ರಿ ಹಾಗೂ ಹರೀಶ್ ಬೈಲಕೆರೆ ಮೊದಲಾದವರು ಭಾಗವಹಿಸಿದ್ದರು.