ಮಮತಾ ಜೊತೆ ಮಾತುಕತೆಗೆ ಒಪ್ಪಿದ ವೈದ್ಯರು: ಆದರೆ ಒಂದು ಶರತ್ತು…!

Update: 2019-06-16 17:45 GMT

ಕೊಲ್ಕತ್ತಾ, ಜೂ.16: ಸರಕಾರದೊಂದಿಗೆ ನಾವು ಮಾತುಕತೆಗೆ ಸಿದ್ಧ ಎಂದು 6 ದಿನಗಳ ಮುಷ್ಕರದ ನಂತರ ಪಶ್ಚಿಮ ಬಂಗಾಳದ ವೈದ್ಯರು ಹೇಳಿಕೆ ನೀಡಿದ್ದಾರೆ. ಆದರೆ ಅವರು ಒಂದು ಶರತ್ತನ್ನು ಮುಂದಿಟ್ಟಿದ್ದಾರೆ.

ಸಹೋದ್ಯೋಗಿಯ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು, “ನಾವು ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಇದನ್ನು ಕೊನೆಗೊಳಿಸಲು ಬಯಸಿದ್ದೇವೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಮಾತುಕತೆಯ ಮುಚ್ಚಿದ ಬಾಗಿಲ ಹಿಂದೆ ನಡೆಯಬಾರದು. ಕ್ಯಾಮರಾಗಳಿರುವಂತೆ ಮಾಧ್ಯಮಗಳ ಮುಂದೆಯೇ ಚರ್ಚೆ ನಡೆಯಬೇಕು” ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಆರಂಭವಾದ ಪ್ರತಿಭಟನೆ ದೇಶದ ಇತರೆಡೆಗಳಿಗೂ ಹಬ್ಬಿದೆ. ಶುಕ್ರವಾರ ಸುಮಾರು 300 ಸರಕಾರಿ ವೈದ್ಯರು ಕರ್ತವ್ಯಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.  

ಹೊಸದಿಲ್ಲಿ: ಪಶ್ಚಿಮಬಂಗಾಳದಲ್ಲಿ ಇತ್ತೀಚೆಗೆ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ದೇಶಾದ್ಯಂತ ಅತ್ಯಗತ್ಯ ಅಲ್ಲದ ಆರೋಗ್ಯ ಸೇವೆಯನ್ನು ರದ್ದುಗೊಳಿಸುವ ಮೂಲಕ ಈ ಹಿಂದೆ ಘೋಷಿಸಿದಂತೆ ಜೂನ್ 17ರಂದು ಮುಷ್ಕರ ನಡೆಸಲಿದ್ದೇವೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News