‘ಪಾರ್ಲೆ ಜಿ’ ಬಿಸ್ಕೆಟ್ ಕಾರ್ಖಾನೆಯಿಂದ 26 ಬಾಲ ಕಾರ್ಮಿಕರ ರಕ್ಷಣೆ

Update: 2019-06-16 16:07 GMT

ರಾಯ್‌ಪುರ, ಜೂ. 16: ಜನಪ್ರಿಯ ಬ್ರಾಂಡ್ ಆಗಿರುವ ‘ಪಾರ್ಲೆ ಜಿ’ ಬಿಸ್ಕೆಟ್ ಕಾರ್ಖಾನೆಯಿಂದ 26 ಬಾಲಕಾರ್ಮಿಕರನ್ನು ಜಿಲ್ಲಾ ಕ್ಷಿಪ್ರ ಕಾರ್ಯಪಡೆ ರಕ್ಷಿಸಿದೆ. ‘‘ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ನಾವು ಕಾರ್ಯಾಚರಣೆ ನಡೆಸಿದೆವು ಹಾಗೂ ಪಾರ್ಲೆ ಜಿ ಬಿಸ್ಕೆಟ್ ಕಾರ್ಖಾನೆಯಿಂದ 26 ಮಕ್ಕಳನ್ನು ರಕ್ಷಿಸಿದೆವು’’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನವನೀತ್ ಸ್ವರ್ಣಕರ್ ತಿಳಿಸಿದ್ದಾರೆ.

ರಾಯ್‌ಪುರದ ಅಮಸಿವ್ನಿ ಪ್ರದೇಶದಲ್ಲಿರುವ ಪಾರ್ಲೆ ಜಿ ಕಾರ್ಖಾನೆಯಲ್ಲಿ ದೊಡ್ಡ ಸಂಖ್ಯೆಯ ಮಕ್ಕಳು ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಚ್ಪನ್ ಬಚಾವೊ ಆಂದೋಲನ (ಬಾಲ್ಯ ರಕ್ಷಿಸಿ ಆಂದೋಲನ) ದಿಂದ ಮಾಹಿತಿ ದೊರಕಿದ ಬಳಿಕ ಈ ಕಾರ್ಯಚರಣೆ ನಡೆಸಲಾಗಿತ್ತು.

ರಕ್ಷಿಸಲಾದ ಹೆಚ್ಚಿನ ಮಕ್ಕಳು 12ರಿಂದ 16 ವರ್ಷದ ಒಳಗಿನವರು ಹಾಗೂ ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ ಹಾಗೂ ಬಿಹಾರ್ ರಾಜ್ಯದವರು.

ನಾವು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕೆಲಸ ಮಾಡುತ್ತೇವೆ. ನಮಗೆ ತಿಂಗಳಿಗೆ 5 ಸಾವಿರದಿಂದ 7 ಸಾವಿರದ ವರೆಗೆ ವೇತನ ನೀಡಲಾಗುತ್ತದೆ ಎಂದು ಮಕ್ಕಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘‘ನಮ್ಮ ದೇಶದ ಪ್ರತಿಯೊಂದು ಮನೆಯಲ್ಲಿ ಜನಪ್ರಿಯವಾಗಿರುವ ಪಾರ್ಲೆ ಜಿಯಂತಹ ಬ್ರಾಂಡ್‌ಗಳು ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು, ಲಕ್ಷಾಂತರ ಮಕ್ಕಳ ನಂಬಿಕೆಯಲ್ಲಿ ಬೆಳೆದು ಬಂದ ಕಾರ್ಖಾನೆಯಲ್ಲಿ ಮಕ್ಕಳ ಶೋಷಣೆ ನಡೆಸುತ್ತಿರುವುದು ಅವಮಾನಕರ’’ ಎಂದು ಬಚ್ಪನ್ ಬಚಾವೊ ಆಂದೋಲನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಮೀರ್ ಮಾಥುರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News